Ticker

6/recent/ticker-posts

Ad Code

ಶಿಕ್ಷಕರ ದಿನಾಚರಣೆ; ಮಾಧವ ತೆಕ್ಕೆಕೆರೆ ದಂಪತಿಗೆ ಗೌರವಾರ್ಪಣೆ


 ಬದಿಯಡ್ಕ : ಶಿಕ್ಷಕರ ದಿನಾಚರಣೆಯಂಗವಾಗಿ ಪೆರಡಾಲ ಸರಕಾರಿ ಹೈಸ್ಕೂಲಿನ ಅಧ್ಯಾಪಕ  ಮಾಧವ ತೆಕ್ಕೆಕೆರೆ ಮತ್ತು ಪತ್ನಿ ಮುಳ್ಳೇರಿಯ ಸರಕಾರಿ  ವೊಕೇಶನಲ್ ಹೈಯರ್ ಸೆಕೆಂಡರಿ ಶಾಲಾ ಉಪನ್ಯಾಸಕಿ ರಜಿತ .ಕೆ.ಎ.ಅವರನ್ನು  ಮುಳ್ಳೇರಿಯ ಸ್ವ ಗೃಹದಲ್ಲಿ ಗೌರವಿಸಲಾಯಿತು . ಮಾಧವ ಮಾಸ್ತರ್ ಅಭಿಮಾನಿಗಳ ಮತ್ತು ಆತ್ಮೀಯರ ಬಳಗದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು . ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ .ಕೆ.ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು .

ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ದರ್ಬೆತ್ತಡ್ಕ , ಬದಿಯಡ್ಕ ಗ್ರಾಮ ಪಂಚಾಯತು ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ   ಗಂಗಾಧರ ಗೋಳಿಯಡ್ಕ , ಪಡ್ರೆ ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಉಪನ್ಯಾಸಕಿ ವಿಜಿ .ಕೆ ,  ಭಾಗವಹಿಸಿದ್ದರು . ಕವಿ , ಉಪನ್ಯಾಸಕ ಬಾಲಕೃಷ್ಣ ಬೇರಿಕೆ ಅಭಿನಂದನಾ ನುಡಿಗಳನ್ನಾಡಿದರು . ಮಾಧವ ಮಾಸ್ತರ್ ಮತ್ತು ಪತ್ನಿ ರಜಿತ ಟೀಚರ್ ತಮ್ಮ ಜೀವನಾನುಭವ , ವೃತ್ತಿ ಜೀವನದ ಘಟನೆಗಳನ್ನು ಸಂಕ್ಷಿಪ್ತವಾಗಿ ತಿಳಿಸಿದರು . ಸಮತಾ ಸಾಹಿತ್ಯ ವೇದಿಕೆಯ ಸಂಚಾಲಕ ಸುಂದರ ಬಾರಡ್ಕ ವಂದಿಸಿದರು . ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಕಾರ್ಯಕ್ರಮ   ನಿರೂಪಿಸಿದರು .

Post a Comment

0 Comments