Ticker

6/recent/ticker-posts

Ad Code

ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ವಿದ್ಯಾರ್ಥಿ ಮೃತ್ಯು, ಓರ್ವನಿಗೆ ಗಂಭೀರ ಗಾಯ


 ಕಾಸರಗೋಡು: ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ವಿದ್ಯಾರ್ಥಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಬೇಡಡ್ಕ ನಿವಾಸಿ ಸಿ.ರಾಮಚಂದ್ರನ್ ರವರ ಪುತ್ರ ಕೌಶಿಕ್ ನಾಥ್(19) ಮೃತಪಟ್ಟ ವಿದ್ಯಾರ್ಥಿ. ಈತನ ಜತೆಗಿದ್ದ ಗೆಳೆಯ ಕೈಲಾಸ್ ನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ (ಶುಕ್ರವಾರ) ರಾತ್ರಿ 9 ಗಂಟೆಯ ವೇಳೆ ಪೊಯ್ನಾಚಿ- ಕುಂಡಂಗುಯಿ ರಸ್ತೆಯ ಪರಂಬ ಎಂಬಲ್ಲಿ ಈ ಘಟನೆ ನಡೆದಿದೆ. ಚೆರ್ಕಳದಲ್ಲಿರುವ ಗೆಳೆಯನ ಮನೆಗೆ ಹೋಗಿ ಹಿಂತಿರುಗುವಾಗ ಈ ಅಪಘಾತ ನಡೆದಿದೆ. ಸ್ಥಳೀಯರು ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಿದರೂ ಕೌಶಿಕ್ ನಾಥ್ ಮೃತಲಟ್ಟಿದ್ದನು. ಸ್ಕೂಟರ್ ಚಲಾಯಿಸುವ ವೇಳೆ ಕೌಶಿಕ್ ನಾಥ್ ನಿಗೆ ಹೃದಯಾಘಾತವಾಗಿರಬೇಕು ಎಂದು ಶಂಕಿಸಲಾಗಿದೆ

Post a Comment

0 Comments