ಮದ್ಯ ಸೇವಿಸಿ ಪರಸ್ಪರ ಜಗಳವಾಡಿ ತಂದೆ ಮಗನನ್ನು ಇರಿದು ಕೊಲೆಗೈದ ಘಟನೆ ನಡೆದಿದೆ. ತಿರುವನಂತಪುರಂ ಕಾರ್ಯವಟ್ಟಂ ನಿವಾಸಿ ಉಲ್ಲಾಸ್(35) ಕೊಲೆಗೀಡಾದ ವ್ಯಲ್ತೊಯಾಗಿದ್ದು ಈತನ ತಂದೆ ಉಣ್ಣಿಕೃಷ್ಣನ್ ನಾಯರ್(58) ರನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ (ಶನಿವಾರ) ರಾತ್ರಿ 10 ಗಂಟೆಯ ವೇಳೆಈ ಘಟನೆ ನಡೆದಿದೆ.
ತಂದೆ ಹಾಗೂ ಮಗ ಪ್ರತಿದಿನವೂ ಮದ್ಯ ಸೇವಿಸಿ ಜಗಳವಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರ ಪತ್ನಿಯರು ಬೇರೊಂದು ಮನೆಯಲ್ಲಿ ವಾಸಿಸುತ್ತಿದ್ದರು. ನಿನ್ನೆ ರಾತ್ರಿ ಇಬ್ನರೂ ಒಟ್ಟಾಗಿ ಮದ್ಯ ಸೇವಿಸಿದ್ದರು. ಅನಂತರ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದ್ದು ಕೊಲೆಯಲ್ಲಿ ಕೊನೆಗೊಂಡಿತು ಎಂದು ಪೊಲೀಸರು ತಿಳಿಸಿದ್ದಾರೆ
0 Comments