Ticker

6/recent/ticker-posts

Ad Code

ಎಡನೀರು ಶ್ರೀಗಳ‌ ನೇತೃತ್ವದಲ್ಲಿ ಕ್ಷೇತ್ರ ರಕ್ಷಾ ಯಾತ್ರೆ ವಾಹನ ಜಾಥ ಆರಂಭ


 ಕಾಸರಗೋಡು: ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು, ಶ್ರೀ ಶಂಕರಾಚಾರ್ಯ ಸಂಸ್ಥಾನಂ, ಶ್ರೀ ಎಡನೀರು ಮಠ ಇವರ ನೇತೃತ್ವದಲ್ಲಿ ಕ್ಷೇತ್ರ ರಕ್ಷಾ ಯಾತ್ರೆ- ವಾಹನ ಜಾಥ ಆರಂಭಗೊಂಡಿದೆ. 
ಇಂದು ಬೆಳಗ್ಗೆ ಎಡನೀರು ಮಠದಿಂದ ಯಾತ್ರೆ ಆರಂಭಗೊಂಡಿದ್ದು  ನೂರಾರು ಮಂದಿ ಆಗಮಿಸಿದ್ದರು.
 ಅನಂತರ ಕಾಸರಗೋಡು,ಕುಂಬಳೆ,ಉಪ್ಪಳ,ಮಂಜೇಶ್ವರ- ಉದ್ಯಾವರ, ತಲಪಾಡಿ ದಾರಿಯಾಗಿ ಪಂಪು ವೆಲ್ ಮೂಲಕ  ಬಂಟ್ವಾಳ- ಬೆಳ್ತಂಗಡಿ- ಉಜಿರೆ ಮೂಲಕ ಧರ್ಮಸ್ಥಳ ಸೇರಲಿದೆ.ಧರ್ಮಸ್ಥಳ ಮುಖ್ಯ ದ್ವಾರದಿಂದ ಕಾಲ್ನಡಿಗೆಯಲ್ಲಿ ಅಮೃತವರ್ಷಿಣಿ ಸಭಾಂಗಣಕ್ಕೆ ಆಗಮಿಸಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತವೃಂದ. ಕಾಸರಗೋಡು ಜಿಲ್ಲೆ ಇದರ ಆಶ್ರಯದಲ್ಲಿ ಯಾತ್ರೆ ನಡೆಯುತ್ತಿದೆ

Post a Comment

1 Comments