Ticker

6/recent/ticker-posts

Ad Code

17 ವರ್ಷದ ಮಗಳ ಮೇಲೆ ಆಸಿಡ್ ಎರಚಿ ಗಂಭೀರ ಗಾಯಗೊಳಿಸಿದ ತಂದೆ


 ಕಾಸರಗೋಡು: 17 ವರ್ಷದ ಪುತ್ರಿಯ ಮೇಲೆ ತಂದೆ ಆಸಿಡ್ ಎರಚಿ ಗಾಯಗೊಳಿಸಿದ ಘಟನೆ ನಡೆದಿದೆ. ಜಿಲ್ಲೆಯ ರಾಜಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಪಾರಕ್ಕಡವ್ ಎಂಬಲ್ಲಿ ನಿನ್ನೆ (ಶುಕ್ರವಾರ) ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕರ್ಣಾಟಕ ಕರಿಕ್ಕೆ ನಿವಾಸಿ ಕೆ.ಸಿ.ಮನೋಜ್ ವಿರುದ್ದ ರಾಜಪುರಂ ಪೊಲೀಸರು ಜಾಮೀನುರಹಿತ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ. ಮನೋಜರ ಕುಟುಂಬದಲ್ಲಿ ಭಿನ್ನಮತ ಮೂಡಿದ ಕಾರಣ ಪತ್ನಿ ಹಾಗೂ ಮಗಳು ಪಾರಕ್ಕಡವ್ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು. ನಿನ್ನೆ ಅಲ್ಲಿಗೆ ಆಗಮಿಸಿದ ಮನೋಜ್, ಮಗಳ ಶರೀರಕ್ಕೆ ಆಸಿಡ್ ಎರಚಿದ್ದಾನೆ. ಆಕೆಯ ಕೈ ಕಾಲಯಗಳಿಗೆ ಗಂಭೀರ ಗಾಯಗಳಾಗಿವೆ. ಆಕೆಯ ಜತೆಗಿದ್ದ 10 ವರ್ಷದ ಬಾಲಕಿಯ ಮೇಲೂ ಆಸಿಡ್ ತಾಗಿದ್ದು ಆಕೆಗೂ ಗಾಯಗಳಾಗಿವೆ. ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಆರೋಪಿ ಮನೋಜ್ ತಲೆ ಮರೆಸಿಕೊಂಡಿದ್ದಾನೆ

Post a Comment

0 Comments