Ticker

6/recent/ticker-posts

Ad Code

ಅಗ್ನಿ ಫ್ರೆಂಡ್ಸ್ ಬದಿಯಡ್ಕ ಆಶ್ರಯದಲ್ಲಿ ನೂತನ ಅಂಬ್ಯುಲೆನ್ಸ್ ಲೋಕಾರ್ಪಣೆ



ಬದಿಯಡ್ಕ: ಅಗ್ನಿ ಫ್ರೆಂಡ್ಸ್ ಬದಿಯಡ್ಕ ಆಶ್ರಯದಲ್ಲಿ ನೂತನ ಅಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ತಿರುವೋಣಂ ದಿನದಂದು ಬದಿಯಡ್ಕ ಪೇಟೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬದಿಯಡ್ಕ ಖಂಡ ಸಂಘಚಾಲಕ ರಮೇಶ್ ಕಳೇರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. 
ಅಗ್ನಿ ಫ್ರೆಂಡ್ಸ್ ಅಧ್ಯಕ್ಷ ಅನಿಲ್ ಕುಟ್ಟನ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್.ಅವರು ಅಂಬ್ಯುಲನ್ಸ್ ಉಧ್ಘಾಟಿಸಿ ಸ್ವತಃ ಚಲಾಯಿಸಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುನಿಲ್.ಪಿ.ಆರ್, ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ವಾಂತಿಚಾಲು, ವಿ.ಬಾಲಕೃಷ್ಣ ಶೆಟ್ಟಿ, ಇತರರಾದ ಹರೀಶ್ ನಾರಂಪಾಡಿ, ಹರೀಶ್ ಗೋಸಾಡ, ಹರಿಪ್ರಸಾದ್ ಪುತ್ರಕಳ, ಗಂಗಾಧರ ಪಳ್ಳತ್ತಡ್ಕ, ದಾಮೋದರ ಟೈಲರ್ ಮೊದಲಾದವರು ಉಪಸ್ಥಿತರಿದ್ದರು. ಅವಿನಾಶ್ ವಿ ರೈ ಸ್ವಾಗತಿಸಿ ಅಗ್ನಿ ಝಾನ್ಸಿ ಕ್ಲಬ್ ಅಧ್ಯಕ್ಷೆ ಭುವನೇಶ್ವರಿ ವಂದಿಸಿದರು.

Post a Comment

0 Comments