ಮಂಜೇಶ್ವರ : ದೇಶೀಯ ಅಧ್ಯಾಪಕ ಪರಿಷತ್ ಮಂಜೇಶ್ವರ ಉಪಜಿಲ್ಲಾ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶ್ರೀ ಶಂಕರನಾರಾಯಣ ಭಟ್ ಸಾದಂಗಾಯ, ನಿವೃತ್ತ ಮುಖ್ಯಶಿಕ್ಷಕರು,ಜಿ.ಎಚ್.ಎಸ್.ಎಸ್ ಮಂಗಲ್ಪಾಡಿ ಇವರನ್ನು ಸ್ವಗೃಹದಲ್ಲಿ ಗೌರವಿಸಲಾಯಿತು.ಎನ್ ಟಿ ಯು ಮಂಜೇಶ್ವರ ಉಪಜಿಲ್ಲಾ ಸಮಿತಿ ಸದಸ್ಯರಾದ ಗಣೇಶ್ ಕುಮಾರ್ ಸನ್ಮಾನಿತರ ಬಗ್ಗೆ ಮಾತನಾಡಿದರು. ಎ ಯು ಪಿ ಎಸ್ ಆನೆಕಲ್ ಶಾಲೆಯ ನಿವೃತ್ತ ಮುಖ್ಯಶಿಕ್ಷರಾದ ಸತ್ಯನಾರಾಯಣ ಭಟ್, ಎನ್ ಟಿ ಯು ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಟೀಚರ್ ಹಾಗೂ ಸನ್ಮಾನಿತರ ಧರ್ಮಪತ್ನಿ ನಿರ್ಮಲಾ ಟೀಚರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಕಾರ್ಯಕ್ರಮದಲ್ಲಿ ಮಂಜೇಶ್ವರ ಉಪಜಿಲ್ಲಾ ಸದಸ್ಯರಾದ ನಿವೇದಿತಾ ಹಾಗೂ ತುಳಸಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಜಿಲ್ಲಾ ಜೊತೆ ಕಾರ್ಯದರ್ಶಿ ಈಶ್ವರ್ ಕಿದೂರು ನಿರೂಪಿಸಿ ಸ್ವಾಗತಿಸಿದರು. ಉಪಜಿಲ್ಲಾ ಕೋಶಾಧಿಕಾರಿ ರಘುವೀರ್ ರಾವ್ ವಂದಿಸಿದರು.
0 Comments