Ticker

6/recent/ticker-posts

Ad Code

ಸಂತಡ್ಕದಲ್ಲಿ ಹಿಂದು ಮುಸ್ಲಿಂ ಸೌಹಾರ್ದತೆ ಮೆರೆದ ಈದ್ ಮಿಲಾದ್ ಉತ್ಸವ

 


ಮೂಡಂಬೈಲು : ಜಗತ್ತಿನ ಹಲವೆಡೆ ಜಾತಿ ಮತ ಧರ್ಮದ ಆಧಾರದಲ್ಲಿ ಪರಸ್ಪರ ಸಂಘರ್ಷ ನಡೆಸುತ್ತಿರುವ ಸಂದರ್ಭ  ನೆಬಿ ದಿನದ ಸಂಭ್ರಮದಲ್ಲಿ ಮೆರವಣಿಗೆಯ ಮೂಲಕ ನಡೆದುಕೊಂಡು ಬಂದ ಮುಸ್ಲಿಂ ಬಾಂಧವರಿಗೆ ಸಿಹಿ ತಿಂಡಿ ಮತ್ತು ಪಾಯಸ ವಿತರಿಸುವ ಮೂಲಕ  ಸಂತಡ್ಕ ಪ್ರದೇಶಿಗರು ಸೌಹಾರ್ದತೆ ಮೆರೆಯುವ ಮೂಲಕ ಮಾದರಿಯಾಗಿದ್ದಾರೆ.

 ಈದ್ ಮಿಲಾದ್ ನ ಅಂಗವಾಗಿ ಸಂತಡ್ಕದಿಂದ ಬಾಳ್ಯೂರು ತನಕ ಮುಸ್ಲಿಂ ಬಾಂಧವರ ಮೆರವಣಿಗೆ ನಡೆದಿತ್ತು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಸಂತಡ್ಕದ ವತಿಯಿಂದ ಮುಸ್ಲಿಂ ಬಾಂಧವರಿಗೆ ಲಡ್ಡು ಮತ್ತು ಪಾಯಸ ವಿತರಿಸಲಾಯಿತು.

ರಾಮಕೃಷ್ಣ ಸಂತಡ್ಕ,ರಾಜೇಶ್, ನಾರಾಯಣ ನೇತೃತ್ವವಹಿಸಿದ್ದರು. ಸಿಹಿ ತಿಂಡಿ ಸ್ವೀಕರಿಸಿದ ಮುಸ್ಲಿಂ ಬಾಂಧವರು ವಿತರಕರಿಗೆ ಕೃತಜ್ಞತೆ ಸಮರ್ಪಿಸಿದರು.

Post a Comment

0 Comments