Ticker

6/recent/ticker-posts

Ad Code

ಕುಂಬಳೆ ಟೋಲ್ ಗೇಟಿನಲ್ಲಿ ಮಂಜೇಶ್ವರ ತಾಲೂಕಿನ ಜನರಿಗೆ ರಿಯಾಯಿತಿ ನೀಡಬೇಕು, ಬಿಜೆಪಿ ಕೋಜಿಕ್ಕೋಡು ವಲಯ ಉಪಾಧ್ಯಕ್ಷ ವಿಜಯಕುಮಾರ್ ರೈ ಒತ್ತಾಯ, ಕೇಂದ್ರ ಸಾರಿಗೆ ಸಚಿವರಿಗೆ ಮನವಿ


 ಉಪ್ಪಳ: ರಾಷ್ಟ್ರೀಯ ಹೆದ್ದಾರಿ ಕುಂಬಳೆಯಲ್ಲಿ ಆರಂಭಗೊಳ್ಳಲಿರುವ ಟೋಲ್ ಗೇಟ್ ನಲ್ಲಿ ಮಂಜೇಶ್ವರ ತಾಲೂಕಿನ ವಾಹನಗಳಿಗೆ ರಿಯಾಯಿತಿ ನೀಡಬೇಕು ಎಂದು ಬಿಜೆಪಿ ಕೋಜಿಕ್ಕೋಡು ವಲಯ ಉಪಾಧ್ಯಕ್ಷ ವಿಜಯ ಕುಮಾರ್ ರೈ ಒತ್ತಾಯಿಸಿದ್ದಾರೆ. ಅವರು ಈ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ತಾತ್ಕಾಲಿಕ ಟೋಲ್ ಗೇಟ್ ನಲ್ಲಿ ಮಂಜೇಶ್ವರ ತಾಲೂಕಿನ 8 ಪಂಚಾಯತುಗಳಿಗೆ 0% ರಿಯಾಯಿತಿ ನೀಡಬೇಕು ಎಂದವರು ಒತ್ತಾಯಿಸಿದ್ದಾರೆ. ಟೋಲ್ ಗೇಟು ವಿಷಯದಲ್ಲಿ ಯುಡಿಎಫ್, ಎಲ್.ಡಿ.ಎಫ್ ಹಾಗೂ ಎಸ್.ಡಿ.ಪಿ.ಐ ಎಂಬಿವು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ. ಇತರ ಸಮಸ್ಯೆಗಳನ್ನು ಕಂಡೂ ಕಾಣದಂತೆ ನಟಿಸುವ ಈ ಮಂದಿ ರಾಷ್ಟ್ರೀಯ ಹೆದ್ದಾರಿಯ ಹೆಸರಿನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದೆ ಎಂದವರು ದೂರಿದರು

Post a Comment

0 Comments