Ticker

6/recent/ticker-posts

Ad Code

ಕಾಸರಗೋಡು ಕೊರಕ್ಕೋಡ್ ನಾಗರಕಟ್ಟೆ ಬಳಿಯ ಯುವಕನ ಮೃತದೇಹ ನಿರ್ಜನ ಬಾವಿಯಲ್ಲಿ ಪತ್ತೆ

 

ಕಾಸರಗೋಡು: ಯುವಕನೊಬ್ಬನ ಮೃತದೇಹ  ನಿರ್ಜನ ಮನೆಯ ಬಳಿಯ ಬಾವಿಯಲ್ಲಿ  ಪತ್ತೆಯಾಗಿದೆ. ಕಾಸರಗೋಡು ನಗರ ಸಮೀಪದ ನಾಗರಕಟ್ಟೆಯ ಕೊರಕ್ಕೋಡ್ ನ ಶಾರದಾಂಬ ಭಜನಾ ಮಂದಿರ ಬಳಿಯ ರಮಾನಂದ್ ಅವರ ಪುತ್ರ ಪ್ರಸಾದ್ (34) ಅವರ ಮೃತದೇಹ ಇದೆಂದು ಗುರುತಿಸಲಾಗಿದೆ. ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಪ್ರಸಾದ್ ತನ್ನ ಅಣ್ಣನ ಸ್ಕೂಟರ್ ನಲ್ಲಿ ಮನೆಯಿಂದ ಹೊರಟಿದ್ದರು. ಮಧ್ಯರಾತ್ರಿ ಕಳೆದರೂ ಅವರು ಹಿಂತಿರುಗದಿದ್ದಾಗ ಅವರ ಮೊಬೈಲ್ ಫೋನ್ ನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರು, ಆದರೆ ಅದು ಸ್ವಿಚ್ ಆಫ್ ಆಗಿತ್ತು. ನಂತರ ಮನೆಯವರು ಪೊಲೀಸರಿಗೆ ದೂರು ನೀಡಿದರು. ಹುಡುಕಾಟದ ನಡುವೆ ಭಾನುವಾರ ಮಧ್ಯಾಹ್ನ ಸ್ಕೂಟರ್ ಕೊರಕ್ಕೋಡ್ ಗದ್ದೆ ಬಳಿಯ  ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಥಿತಿಯಲ್ಲಿ ಕಂಡುಬಂದಿತು. ಇದರ ಸಮೀಪದಲ್ಲಿಯೇ ಇದ್ದ ಬಾವಿಯ ಬಳಿ ಪ್ರಸಾದ್ ಅವರ ಶೂಗಳು ಪತ್ತೆಯಾಗಿವೆ. ಬಳಿಕ ಅಗ್ನಿಶಾಮಕ ದಳ ಆಗಮಿಸಿ ಬಾವಿಯನ್ನು ಶೋಧಿಸಿದಾಗ ಶವ ಪತ್ತೆಯಾಗಿದೆ. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಕಾಸರಗೋಡು ಪೊಲೀಸರು ಅಸ್ವಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಸಾದ್ ಬಡಗಿ ಕೆಲಸ ಮಾಡುತ್ತಿದ್ದರು. ಮೃತರು ತಾಯಿ ಆಶಾ. ಸಹೋದರರಾದ  ವಿನಯರಾಜ್, ನಿತಿನ್ ಎಂಬಿವರನ್ನಗಲಿದ್ದಾರೆ.

Post a Comment

0 Comments