Ticker

6/recent/ticker-posts

Ad Code

ಆರ್ಲಪದವು ಸಿಸಿ ಟಿವಿಯಲ್ಲಿ ಸೆರೆಯಾದುದು ಕಾಡುಬೆಕ್ಕು: ಅರಣ್ಯ ಇಲಾಖೆ ಸ್ಪಷ್ಟನೆ

ಪೆರ್ಲ: ಪಾಣಾಜೆ ಆರ್ಲಪದವು ಬದ್ರಿಯಾ ಮಸೀದಿಯ ಸಿಸಿ ಟಿವಿಯಲ್ಲಿ ಕಾಣಿಸಿದ್ದು ಚಿರತೆಯಲ್ಲ, ಚಿರತೆಯನ್ನು ಹೋಲುವ ಕಾಡು ಬೆಕ್ಕು ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ. ಮಸೀದಿಯ ಸಿಸಿ ಟಿವಿಯಲ್ಲಿ ಬುಧವಾರ ತಡರಾತ್ರಿ 2 ಗಂಟೆ ವೇಳೆ ಪುತ್ತೂರು ಪಾಣಾಜೆ ರಸ್ತೆಯಲ್ಲಿ ಚಿರತೆಯನ್ನು ಹೋಲುವ ಪ್ರಾಣಿ ಸಂಚರಿಸುವ ದೃಶ್ಯ ಸೆರೆಯಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ದೃಶ್ಯಾವಳಿಗಳು ಕಾಡು ಬೆಕ್ಕಿನದ್ದು ಎಂದು ದೃಢೀಕರಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬದ್ರಿಯಾ ಮಸೀದಿ ರಸ್ತೆ ಕೆಳಗೆ ಬೋನ್ ಇರಿಸಲಾಗಿದೆ. ಗ್ರಾಮಸ್ಥರು ಹೆದರುವ ಅಗತ್ಯ ಇಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Post a Comment

0 Comments