ಕಾಸರಗೋಡು: ಪುಲ್ಲೂರು ಕೊಡವಲಂ ಎಂಬಲ್ಲಿನ ಮನೆಯೊಂದರ ತೋಟದ ಕೆರೆಗೆ ಬಿದ್ದ ಎರಡರ ಹರೆಯದ ಚಿರತೆಯನ್ನು ಅರಣ್ಯ ಇಲಾಖೆ ರಕ್ಷಿಸಿ ಕೊಂಡೊಯ್ದು ಬೋನಿಗೆ ಹಾಕಿದೆ. ಇಲ್ಲಿನ ಮಧು ಎಂಬವರ ತೋಟದ ಕೆರೆಗೆ ರವಿವಾರ ಮುಸ್ಸಂಜೆ ಚಿರತೆ ಬಿದ್ದಿತ್ತು. ಮನೆಯ ಪೈಪಿನಲ್ಲಿ ನೀರು ಬಾರದೇ ಇದ್ದಾಗ, ನೀರಿಗಾಗಿ ಮೋಟಾರು ಪಂಪ್ ಚಲಾಯಿಸಲೆಂದು ಕೆರೆಯ ಬಳಿ ತೆರಳಿದಾಗ ಕೆರೆಯಲ್ಲಿ ಚಿರತೆ ಬಿದ್ದಿರುವುದು ಮನೆಯವರ ಗಮನಕ್ಕೆ ಬಂದಿದೆ. ನೀರಿಗೆ ಬಿದ್ದ ಚಿರತೆ ಪೈಪನ್ನು ಅವಲಂಬಿಸಿ ಜೀವ ಕಾಪಾಡಲು ಪ್ರಯತ್ನಿಸುತಿತ್ತು. ಕೂಡಲೇ ಸುದ್ದಿ ತಿಳಿದು ಸ್ಥಳೀಯರು ಮತ್ತು ಅರಣ್ಯ ಇಲಾಖೆಯವರು ರಕ್ಷಣೆಗೆ ಧಾವಿಸಿದ್ದರು. ರಾತ್ರಿ ನಡೆದ ಕಾರ್ಯಚರಣೆಯಲ್ಲಿವಹತ್ತು ಗಂಟೆಯ ವೇಳೆಗೆ ಅದನ್ನು ರಕ್ಸಿಸಿ ಬೋನಿಗೆ ಹಾಕಿ ಅರಣ್ಯ ಇಲಾಖೆ ಕೊಂಡೊಯ್ದಿದೆ. ಕಾಞಂಗಾಡು ರೇಂಜ್ ಅರಣ್ಯ ಇಲಾಖೆ ಅಧಿಕಾರಿ ಜೋಸ್ ಮ್ಯಾಥ್ಯೂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

0 Comments