ಬೆಳ್ಳೂರು: ಬಿಜೆಪಿಯ ಭದ್ರಕೋಟೆಗಳಲ್ಲಿ ಒಂದಾಗಿರುವ ಬೆಳ್ಳೂರು ಪಂಚಾಯತಿಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಪಂಚಾಯತ್ ಹಾಲಿ ಉಪಾಧ್ಯಕ್ಷೆಯೇ ಇದೀಗ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದು ಕುತೂಹಲ ಕೆರಳಿಸಿದೆ. ಹಾಲಿ ಉಪಾಧ್ಯಕ್ಷೆ ಗೀತಾ ಕೆ. ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಗೀತಾ ತೀರ್ಮಾನಿಸಿದ್ದರೂ ಕೊನೆ ಗಳಿಗೆಯಲ್ಲಿ 8ನೇ ವಾರ್ಡ್ ನಿಂದ ಸ್ಪರ್ಧಿಸುವಂತೆ ಪಕ್ಷದ ನಾಯಕತ್ವ ತಿಳಿಸಿದೆ. ಆದರೆ ಗೀತಾ ತಿರಸ್ಕರಿಸಿದ್ದರು.
ಇದೀಗ ಪಕ್ಷದ ಕೆಲವು ನಿಷ್ಟಾವಂತ ಕಾರ್ಯಕರ್ತರು, ಹಾಗೂ ಜನರ ಒತ್ತಾಯದ ಮೇರೆಗೆ ಕೊನೆಗಳಿಗೆಯಲ್ಲಿ 5ನೇ ವಾರ್ಡ್ ಕಾಯರ್ ಪದವಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾಗಿ ಗೀತಾ ತಿಳಿಸಿದ್ದಾರೆ. ಕಳೆದ ಬಾರಿ ಬೆಳ್ಳೂರು ಪಂಚಾಯತಿನ 13 ವಾರ್ಡ್‌ಗಳಲ್ಲಿ 9 ವಾರ್ಡ್‌ಗಳಲ್ಲಿ ಬಿಜೆಪಿ ಜಯಗಳಿಸಿತ್ತು. ಈ ಬಾರಿ ವಾರ್ಡ್ ವಿಂಗಡನೆಯಲ್ಲಿ ಒಂದು ವಾರ್ಡ್ ಹೆಚ್ಚಳವಾಗಿದೆ.

0 Comments