ಕಾಸರಗೋಡು : ಎನ್.ಸಿ.ಸಿ. ದಿನಾಚರಣೆಯ ಅಂಗವಾಗಿ ಪುನೀತ ಸಾಗರ ಅಭಿಯಾನವನ್ನು ಕಾಸರಗೋಡು ಬಿ.ಇ.ಎಮ್.ಎಚ್.ಎಸ್.ಎಸ್ ನ ಎನ್.ಸಿ.ಸಿ. ವಿದ್ಯಾರ್ಥಿಗಳು ಕಾಸರಗೋಡು ಕಡಪ್ಪುರ ಸಮುದ್ರ ಬದಿಯಲ್ಲಿ ಮಾಲಿನ್ಯದಿಂದ ತುಂಬಿದ ಪ್ಲಾಸ್ಟಿಕ್, ಬಾಟಲ್, ಕಸಕಡ್ಡಿ ಇತ್ಯಾದಿಗಳನ್ನು ಹೆಕ್ಕಿ ಶುಚಿಗೊಳಿಸಿದರು. ಇದಕ್ಕೆ ಮುನ್ನುಡಿಯಾಗಿ ಕಡಪ್ಪುರದ ಅಚ್ಚನವರು, ಸ್ಥಳೀಯ ಪ್ರಮುಖರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪದ್ಯಾಯ ಶ್ರೀ ಗಣೇಶ್ ಶಾಲಾ ನೌಕರ ಸಮಿತಿ ಕಾರ್ಯದರ್ಶಿ ವೈ. ಯಶವಂತ್ ಉಪಸ್ಥಿತರಿದ್ದರು. ಶಾಲಾ ಎನ್.ಸಿ.ಸಿ. ಕೇರ್ ಟೇಕರ್ ಲಿನೋಲ್ಡ್ ಜೋಸೆಪ್, ಶಾಲಾ ಎಸ್.ಎಮ್.ಸಿ. ಚಯರ್ ಮೆನ್ ಡಾl ಕೆ.ಎನ್. ವೆಂಕಟ್ರಮಣ ಹೊಳ್ಳ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಕೊನೆಯಲ್ಲಿ ಮಕ್ಕಳಿಗೆ ತಂಪು ಪಾನೀಯ, ಉಪಹಾರ ವಿತರಿಸಲಾಯಿತು. ನೂರು ಮಕ್ಕಳು ಶುಚೀಕರಣದಲ್ಲಿ ಭಾಗಿಯಾದರು.

0 Comments