ವರ್ಕಾಡಿ : ಅಯ್ಯಪ್ಪ ಭಕ್ತವೃಂದ ದೇವಂದ ಪಡ್ಪು ಇದರ ಆಶ್ರಯದಲ್ಲಿ ಜ.3 ಶನಿವಾರದಂದು ಶ್ರೀ ಮಹಾವಿಷ್ಣು ದೇವಸ್ಥಾನ ದೇವಂದ ಪಡ್ಪು ಇದರ ವಠಾರದಲ್ಲಿ ಜರಗಲಿರುವ ಶ್ರೀ ಅಯ್ಯಪ್ಪ ದೀಪೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಕ್ಷೇತ್ರದ ಅರ್ಚಕರಾದ ರಾಘವೇಂದ್ರ ಆಚಾರ್ಯರು ಪ್ರಾರ್ಥಿಸಿ ಬಿಡುಗಡೆಗೊಳಿಸಿದರು. ಸಭೆಯಲ್ಲಿ ಗುರು ಸ್ವಾಮಿಗಳಾದ ಐತಪ್ಪ ಗುರುಸ್ವಾಮಿ, ಕೃಷ್ಣ ಗುರುಸ್ವಾಮಿ, ಸೀತಾರಾಮ ಗುರುಸ್ವಾಮಿ, ಸುರೇಶ್ ಸ್ವಾಮಿ, ಬ್ರಹ್ಮ ಮುಗೇರ ಸೇವಾ ಸಮಿತಿ ಬೋಳದಪದವು ಇದರ ಅಧ್ಯಕ್ಷ ಶೀನ ಬೋಳದ ಪದವು ಅಲ್ಲದೆ ಕ್ಷೇತ್ರದ ಸಮಿತಿಯ ಪದಾಧಿಕಾರಿಗಳಾದ ಮಾಧವ ಪೂಜಾರಿ ಕುದುಕೋರಿ, ಕೇಶವ ಕಿನ್ಯ ಕಜೆ, ರವಿ ಮುಡಿಮಾರು, ಜನಾರ್ಧನ ಪೂಜಾರಿ ಕುಡುಂಬುಲೆ ಗುರಿ, ಶಾಮ ನಾಯ್ಗ ಕೆದುಂಬಾಡಿ, ಇನ್ನಿತರರು ಉಪಸ್ಥಿತರಿದ್ದರು. ಜ.3 ಅಯ್ಯಪ್ಪ ದೀಪೋತ್ಸವದಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮದಂಗವಾಗಿ ಗಣಪತಿ ಹೋಮ, ಭಜನಾ ಸಂಕೀರ್ತನೆ, ಸಂಜೆ ಶ್ರೀ ಕೃಷ್ಣ ಭಜನಾ ಮಂದಿರ ನೆತ್ತಿಲಪದವು ಇಲ್ಲಿಂದ ತಾಲಪೊಲಿ ಶೋಭಾಯಾತ್ರೆ, ತಾಯಂಬಕ ವಾದನ, ಮಹಾಪೂಜೆ , ಅನ್ನಸಂತರ್ಪಣೆಯು ನಡೆಯಲಿರುವುದು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಸುಬ್ರಹ್ಮಣ್ಯ ಇವರಿಂದ ಶ್ರೀ "ಶಬರಿಮಲೆ ಅಯ್ಯಪ್ಪ" ಯಕ್ಷಗಾನವು ನಡೆಯಲಿರುವುದು.

0 Comments