ಪೆರ್ಲ: ಉಕ್ಕಿನಡ್ಕ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 38 ನೇ ವಾರ್ಷಿಕೋತ್ಸವವು ನ.25 ಮಂಗಳವಾರ ಜರಗಲಿದೆ. ಇದರ ಯಶಸ್ವಿಗಾಗಿ ಪೂರ್ವ ಸಿದ್ಧತೆ ಭರದಿಂದ ಸಾಗಿದೆ. ಕಾರ್ಯಕ್ರಮದಂಗವಾಗಿ ಅಂದು ಬೆಳಿಗ್ಗೆ ಗಂಟೆ 8ಕ್ಕೆ ಗಣಪತಿ ಹವನ, 9 ಗಂಟೆಯಿಂದ ಮದ್ಯಾಹ್ನ 12.30ರ ತನಕ ವಿವಿಧ ಭಜನಾ ಸಂಘಗಳಿಂದ ಭಜನೆ, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘ ಉಕ್ಕಿನಡ್ಕ, ಶ್ರೀ ಚಾಮುಂಡೇಶ್ವರಿ ಭಜನಾ ಸಂಘ ಪರ್ತಿಕ್ಕಾರ್, ಶ್ರೀ ಕೃಷ್ಣ ಭಜನಾ ಸಂಘ ವಾಣಿನಗರ ಭಜನಾ ಸೇವೆ ನಡೆಸುವರು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ.5.30ಕ್ಕೆ ತಾಯಂಬಕ, 6.30ರಿಂದ ಉಕ್ಕಿನಡ್ಕದ ಅಶ್ವತ್ತ ಕಟ್ಟೆಯಿಂದ ವಿಶೇಷ ಉಲ್ಪೆ ಮೆರವಣಿಗೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ ಗಂಟೆ 10.30 ರಿಂದ ಶ್ರೀ ಶಾರದಾಂಬ ಯಕ್ಷಗಾನ ಕಲಾ ಸಂಘ ಬದಿಯಡ್ಕ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪುತ್ರಕಳ ಸದಾಶಿವ ಶೆಟ್ಟಿ ವಿರಚಿತ ನಾಟ್ಯ ಗುರು ಜಯರಾಮ ಪಾಟಾಳಿ ಪಡುಮಲೆ ಇವರು ಪದ್ಯ ರಚಿಸಿ, ನಿರ್ದೆಶಿಸಿದ "ನಾಗದರ್ಶನ" ಅತ್ಯಮೋಘ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
.jpeg)
0 Comments