Ticker

6/recent/ticker-posts

Ad Code

ಕಾಸರಗೋಡು ಜಿ.ಪಂ. 113 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ : ಬದಿಯಡ್ಕ, ಮಂಜೇಶ್ವರದ ಇಬ್ಬರ ನಾಮಪತ್ರ ತಿರಸ್ಕೃತ


 ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯಿತಿಗೆ ಸಲ್ಲಿಕೆಯಾಗಿದ್ದ ಎರಡು ನಾಮಪತ್ರಗಳು ತಿರಸ್ಕೃತಗೊಂಡಿವೆ. ಬದಿಯಡ್ಕ ಡಿವಿಶನ್ ನಿಂದ  ಜಿಲ್ಲಾ ಪಂಚಾಯತ್‌ಗೆ ನಾಮಪತ್ರ ಸಲ್ಲಿಸಿದ್ದ ಕೆ. ಬಿಜು ಮತ್ತು ಮಂಜೇಶ್ವರ ಡಿವಿಶನ್ ನಿಂದ ನಾಮಪತ್ರ ಸಲ್ಲಿಸಿದ್ದ ಬುರ್ಷಾ ಅವರ ನಾಮಪತ್ರಗಳನ್ನು ಕೂಲಂಕುಷ  ಪರಿಶೀಲನೆಯ ನಂತರ ತಿರಸ್ಕರಿಸಲಾಯಿತು. ನಾಮಪತ್ರದೊಂದಿಗೆ ಸಲ್ಲಿಸಲಾದ ಪರಿಶಿಷ್ಟ ಜಾತಿ ಪ್ರಮಾಣಪತ್ರದ ಅವಧಿ ಮುಗಿದಿದ್ದರಿಂದ ಬಿಜು ಅವರ ನಾಮಪತ್ರವನ್ನು ತಿರಸ್ಕರಿಸಿದ್ದು, ಇದೇ ಸಮಯದಲ್ಲಿ, ಬುರ್ಷಾ ಅವರು ನಾಮಪತ್ರಕ್ಕೆ ಸಹಿ ಮಾಡದ ಕಾರಣ ಮತ್ತು ಪ್ರಮಾಣಪತ್ರ ಸಲ್ಲಿಸದ ಕಾರಣ ಅವರ ನಾಮಪತ್ರವನ್ನು ತಿರಸ್ಕರಿಸಲಾಯಿತು. 113 ಪತ್ರಿಕೆಗಳು ಸ್ವೀಕೃತಗೊಂಡಿದೆ. ಚುನಾವಣಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಕೆ. ಇಂಶೇಖರ್ ನೇತೃತ್ವದಲ್ಲಿ ಸೂಕ್ಷ್ಮ  ಪರಿಶೀಲನೆ ನಡೆಯಿತು.

Post a Comment

0 Comments