Ticker

6/recent/ticker-posts

Ad Code

ಮುಸ್ಲಿಂ ಲೀಗ್‌ನ ಸಕ್ರಿಯ ಕಾರ್ಯಕರ್ತ ಬಿಜೆಪಿ ಸೇರ್ಪಡೆ


 ಕಾಸರಗೋಡು :ರಾಷ್ಡ್ರೀಯ ಪಕ್ಷವಾದ ಬಿಜೆಪಿಯ ಅಭಿವೃದ್ಧಿ ಸೂತ್ರಗಳಿಗೆ ಆಕರ್ಷಿತರಾದ ಅಲ್ಪ ಸಂಖ್ಯಾತರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವ ಪಕ್ಷಾಂತರ ಪ್ರಕ್ರಿಯೆ ಮುಂದುವರಿಯುತ್ತಿದ್ದು ಇದೀಗ  ಮುಸ್ಲಿಂ ಲೀಗ್‌ನ ಸಕ್ರಿಯ ಕಾರ್ಯಕರ್ತರಾಗಿದ್ದ ಮುಹಮ್ಮದ್ ಸಾಲಿ ಅವರು ಬಿಜೆಪಿ  ಜಿಲ್ಲಾ ಕಚೇರಿಯಲ್ಲಿ  ಸೇರ್ಪಡೆಗೊಳ್ಳುವ ಮೂಲಕ ಪಕ್ಷದ ಬಲವರ್ಧನೆಗೊಳ್ಳುತ್ತಿರುವುದು ಕಂಡು ಬರುತ್ತಿದೆ.ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನೀಲ್, ಜಿಲ್ಲಾ ಉಪಾಧ್ಯಕ್ಷ ಪಿ.ರಮೇಶ್, ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಎಂ. ಸುಹೇಲ್ ಹಾಗೂ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಪಳ್ಳಿಪುಳ ಮೊದಲಾದವರು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.

Post a Comment

0 Comments