Ticker

6/recent/ticker-posts

Ad Code

ನಾಳೆಯಿಂದ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಆರಂಭ

ಕಾಸರಗೋಡು : ತ್ರಿಸ್ತರ ಪಂಚಾಯತ್ ಚುನಾವಣೆಯ ಪೂರ್ವಭಾವಿಯಾಗಿ  ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನವೆಂಬರ್ 25 ರಿಂದ 28 ರವರೆಗೆ ನಡೆಯಲಿದೆ. ನೇಮಕಾತಿ ಆದೇಶವನ್ನು ಪಡೆದ ಅಧಿಕಾರಿಗಳು ಆದೇಶದಲ್ಲಿ ಉಲ್ಲೇಖಿಸಲಾದ ದಿನಾಂಕ ಮತ್ತು ಸಮಯದಲ್ಲಿ ನಿರ್ಧಿಷ್ಟ  ಕೇಂದ್ರಗಳಲ್ಲಿ ತರಬೇತಿಗೆ ಹಾಜರಾಗಬೇಕೆಂದು ರಾಜ್ಯ ಚುನಾವಣಾ ಆಯೋಗ ನಿರ್ದೇಶಿಸಿದೆ. ತರಬೇತಿಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮತಗಟ್ಟೆಯಲ್ಲಿ ವ್ಯವಸ್ಥೆಗಳು ಮತ್ತು ಇತರ ಕಾರ್ಯವಿಧಾನಗಳ ಕುರಿತು ವಿವರವಾದ ತರಗತಿಗಳು ಮತ್ತು ಎಲೆಕ್ಟ್ರಾನಿಕ್ ಮತಯಂತ್ರಗಳ ಕುರಿತು ಪ್ರಾಯೋಗಿಕ ತರಬೇತಿ ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Post a Comment

0 Comments