ಪೆರ್ಲ : ಪಾಲಕ್ಕಾಡ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕೇರಳ ರಾಜ್ಯ ಮಟ್ಟದ ಸಮಾಜ ವಿಜ್ಞಾನ ಮೇಳದಲ್ಲಿ ಭೂಪಟ ತಯಾರಿ ಸ್ಪರ್ಧೆಯಲ್ಲಿ, ತೃತೀಯ ಸ್ಥಾನದೊಂದಿಗೆ ಎ ಗ್ರೇಡ್ ಪಡೆದ ಶೇಣಿ ಶ್ರೀ ಶಾರದಾಂಬ ಪ್ರೌಢಶಾಲೆಯ ವಿದ್ಯಾರ್ಥಿನಿ ತೃಪ್ತಿ .ಯನ್ ಗೆ ಶಾಲಾ ಆಡಳಿತ ಹಾಗೂ ಶಿಕ್ಷಕ ರಕ್ಷಕ ಸಮಿತಿ ಅಭಿನಂದನೆ ಸಲ್ಲಿಸಿದೆ. 10ನೇ ತರಗತಿಯ ವಿದ್ಯಾರ್ಥಿನಿಯಾದ ಈಕೆಯನ್ನು ಶಾಲಾ ಆಡಳಿತ ಸಮಿತಿ ಪರವಾಗಿ ಪ್ರಬಂಧಕಿ ಶಾರದ ವೈ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಅಭಿನಂದಿಸಿದರು.ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲ ಶಾಸ್ತಾ ಕುಮಾರ್ , ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿಲ್ಸನ್ ಡಿಸೋಜ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

0 Comments