Ticker

6/recent/ticker-posts

Ad Code

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಜಿಲ್ಲೆ ನಾಲ್ಕನೇ ಸ್ಥಾನಕ್ಕೆ - ತೀವ್ರ ಪ್ರಯತ್ನಶೀಲರಾದ ಬಿಎಲ್ ಒಗಳನ್ನು ಅಭಿನಂದಿಸಿದ ಜಿಲ್ಲಾಧಿಕಾರಿ

 

ಕಾಸರಗೋಡು : ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದ ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲು ಕಾಸರಗೋಡು ಜಿಲ್ಲೆಯ ಗ್ರಾಮ ಕಚೇರಿಗಳಲ್ಲಿ 26 ರಂದು ನಡೆದ ಮೆಗಾ ಶಿಬಿರದಲ್ಲಿ ಜಿಲ್ಲೆ 53.36% ಕಾರ್ಯಕ್ಷಮತೆಯೊಂದಿಗೆ ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ವಿವಿಧ ಗ್ರಾಮ ಕಚೇರಿಗಳಲ್ಲಿ ಮೆಗಾ ಕ್ಯಾಂಪೆನ್ ನಡೆದಿತ್ತು. ಶಿಬಿರಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಅವಲೋಕನ ನಡೆಸಿದ್ದರು.  ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಭಿಯಾನದಲ್ಲಿ ಬಿಎಲ್‌ಒಗಳ ಪ್ರಯತ್ನವನ್ನು ಜಿಲ್ಲಾಧಿಕಾರಿ ಅಭಿನಂದಿಸಿದ್ದಾರೆ.

Post a Comment

0 Comments