ಮಂಗಳೂರು: ಓಡುತ್ತಿರುವ ಬಸ್ಸಿನಿಂದ ರಸ್ತೆಗೆಸೆಲ್ಪಟ್ಟ ಪ್ರಯಾಣಿಕನಾದ ಮಧ್ಯ ವಯಸ್ಕ ಮೃತಪಟ್ಟ ಘಟನೆ ವರದಿಯಾಗಿದೆ .ಅಪಘಾತದಲ್ಲಿ ಉಚ್ಚಿಲ ಕಾಪು ಪಡುಗ್ರಾಮದ ಸಾಕೇಂದ್ರ ಪೂಜಾರಿ (52) ಮೃತರು. ಘಟನೆ ಶನಿವಾರ ರಾತ್ರಿ ನಡೆದಿದೆ. ಮಂಗಳೂರಿನ ಹೋಟೆಲ್ ಉದ್ಯೋಗಿಯಾಗಿರುವ ಸಾಕೇಂದ್ರ ಅವರು ಮಂಗಳೂರಿನಿಂದ ಉಡುಪಿಗೆ ಖಾಸಗಿ ಬಸ್‌ನಲ್ಲಿ ಮನೆಗೆ ಮರಳಿದ್ದರು. ಅವರು ಉಚ್ಚಿಲದಲ್ಲಿ ಇಳಿಯಬೇಕಿತ್ತು. ಬಸ್ ಉಚ್ಚಿಲ ತಲುಪಿದಾಗ ಸಕೇಂದ್ರ ಇಳಿಯಲು ಮುಂಬಾಗಿಲ ಬಳಿ ನಿಂತಿದ್ದ. ಬಸ್ ಹಠಾತ್ತನೆ ನಿಧಾನಗೊಂಡಾಗ ಅವರು ಬಾಗಿಲಿನಿಂದ ರಸ್ತೆಗೆಸೆಲ್ಪಟ್ಟರು . ಸಕೇಂದ್ರ ತಲೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಕ್ಷಿಸಲಾಗಲಿಲ್ಲ . ಬಸ್ ಚಾಲಕನ ವಿರುದ್ಧ ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

0 Comments