Ticker

6/recent/ticker-posts

Ad Code

ಪೆರ್ಲ ಕುರಡ್ಕದಲ್ಲಿ ನಾಡ ಬಂದೂಕು ಸಹಿತ ಎರಡು ಗುಂಡು ಮತ್ತು 42 ಖಾಲಿ ಸ್ಯಾಶೆಗಳೊಂದಿಗೆ ಒರ್ವನ ಸೆರೆ


ಪೆರ್ಲ: ಪೆರ್ಲ ಬಜಕೂಡ್ಲು ಸಮೀಪ ಕುರಡ್ಕದಲ್ಲಿ ಬದಿಯಡ್ಕ ಪೊಲೀಸರು ನಡೆಸಿದ ದಾಳಿಯಲ್ಲಿ ಪರವಾನಗಿಯಿಲ್ಲದ ನಾಡ ಬಂದೂಕು, ಎರಡು ಗುಂಡು   ಮತ್ತು 42 ಖಾಲಿ ಸ್ಯಾಶೆಗಳನ್ನು ವಶಪಡಿಸಿ ಒಬ್ಬನನ್ನು ಬಂಧಿಸಿದೆ. 

ಜಿಲ್ಲಾ ಪೊಲೀಸ್ ಮುಖ್ಯಸ್ಥ ವಿಜಯ್ ಭರತ್ ರೆಡ್ಡಿ ಅವರಿಗೆ ಲಭಿಸಿದ ಗೌಪ್ಯ ಮಾಹಿತಿಯ ಮೇರೆಗೆ ಬದಿಯಡ್ಕ ಪೊಲೀಸ್ ಇನ್ಸ್‌ಪೆಕ್ಟರ್ ಎ.ಸಂತೋಷ್ ಕುಮಾರ್ ನೇತೃತ್ವದಲ್ಲಿ ಶನಿವಾರ ನಡೆಸಿದ ದಾಳಿಯಲ್ಲಿ ಕುರಡ್ಕದ ಕೃಷ್ಣಪ್ಪ ನಾಯ್ಕ್ ಎಂಬಾತನನ್ನು ಬಂಧಿಸಲಾಗಿದೆ.

ಎಎಸ್‌ಐ ಪ್ರದೀಶ್ ಗೋಪಾಲ್, ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿ ಭಾಸ್ಕರ್, ಗೋಕುಲ್, ಸಿಪಿಒಗಳಾದ ಪ್ರಸೀದಾ ಮತ್ತು ಬಿಜಿಲಾಲ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. 42 ಖಾಲಿ ಸ್ಯಾಶೆಗಳಲ್ಲಿದ್ದ ಗುಂಡುಗಳನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಬೇಟೆಗಾಗಿ ಬಳಸಿರಬಹುದೆಂದು ಸಂಶಯಿಸಲಾಗಿದೆ‌. ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ಭಾಗವಾಗಿ ಮುಂದಿನ ದಿನಗಳಲ್ಲೂ ತಪಾಸಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ‌.


Post a Comment

0 Comments