Ticker

6/recent/ticker-posts

Ad Code

ಚಲಿಸುತ್ತಿದ್ದ ಮೀನಿನ ಲಾರಿಯಲ್ಲಿ ಬೆಂಕಿ : ಭಾರೀ ಅನಾಹುತ ತಪ್ಪಿಸಿದ ಅಗ್ನಿಶಾಮಕ ದಳ

ಕಾಸರಗೋಡು : ಚಲಿಸುತ್ತಿದ್ದ ಮೀನಿನ ಲಾರಿಯಲ್ಲಿ  ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪೆರಿಯ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಬಳಿ ಈ ಘಟನೆ ನಡೆದಿದ್ದು ಪೊನ್ನಾನಿಯಿಂದ ಮಂಗಳೂರಿಗೆ ಮೀನು ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಈ ಸಂದರ್ಭ ಲಾರಿಯಲ್ಲಿ ಚಾಲಕ ಮಾತ್ರ ಇದ್ದು ಬೆಂಕಿ ಹರಡುವುದನ್ನು ನೋಡಿದ ಅವರು ತಕ್ಷಣ ಲಾರಿಯನ್ನು ನಿಲ್ಲಿಸಿ ಹೊರಗೆ ಜಿಗಿದು  ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ‌. ಅಗ್ನಿಶಾಮಕ ತಂಡ ಸ್ಥಳಕ್ಕೆ ತಲುಪಿ ಬೆಂಕಿ ನಂದಿಸಿತು . ಎಂಜಿನ್ ಅತಿಯಾಗಿ ಬಿಸಿಯಾಗಿದ್ದರಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂಬುದು ಪ್ರಾಥಮಿಕ ವರದಿಯಾಗಿದೆ. ಲಾರಿ ಭಾಗಶಃ ಸುಟ್ಟುಹೋಗಿದೆ

Post a Comment

0 Comments