ಶಬರಿಮಲೆ: ಶಬರಿಮಲೆಯಲ್ಲಿ ಭಾನುವಾರ, ಸೋಮವಾರಗಳಲ್ಲಿ ದಟ್ಟಣೆ, ನೂಕು ನುಗ್ಗಲು ಇಲ್ಲದೆ ಭಕ್ತರು ಸುಗಮವಾಗಿ ದರ್ಶನ ಪಡೆದು ಮರಳಿದ್ದಾರೆ. ಮಂಡಲ ಕಾಲ ತೀರ್ಥಾಟನೆ ಆರಂಭವಾದ ಬಳಿಕ ಇದುವರೆಗೆ ಸುಮಾರು 6.50 ಲಕ್ಷ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ. ಕಳೆದ ವರ್ಷ ಮಂಡಲ-ಮಕರಜ್ಯೋತಿ ಋತುವಿನಲ್ಲಿ ಸುಮಾರು 53.60 ಲಕ್ಷ ಯಾತ್ರಿಕರು ದರ್ಶನ ಪಡೆದಿದ್ದರು. ಈ ಬಾರಿ ಇನ್ನೂ ಹೆಚ್ಚಿನ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ. ಮಂಡಲ ತೀರ್ಥಾಟನೆಯ 7ನೇ ದಿನವಾದ ಶನಿವಾರ 83,018 ಭಕ್ತರು ದರ್ಶನ ಪಡೆದಿದ್ದಾರೆ. ಭಾನುವಾರ ಸಂಜೆ 6ರವರೆಗೆ ಸುಮಾರು 64 ಸಾವಿರ ಭಕ್ತರು ಸನ್ನಿಧಾನಕ್ಕೆ ಆಗಮಿಸಿದ್ದಾರೆ. ಶಬರಿಮಲೆಗೆ ಬರುವ ಭಕ್ತರು ವಲಿಯ ನಡಪ್ಪಂದಲ್ (ದೊಡ್ಡ ನಡಿಗೆ ಚಪ್ಪರ) ಮಾರ್ಗದಲ್ಲಿ ಕಾಯದೆಯೇ ನೇರವಾಗಿ 18 ಮೆಟ್ಟಿಲು ಹತ್ತಲು ಸಾಧ್ಯವಾಗಿದೆ. ಇಲಾಖೆಗಳ ಸಮನ್ವಯದೊಂದಿಗೆ ಸುಗಮ ದರ್ಶನ ಖಚಿತ ಪಡಿಸಿಕೊಳ್ಳಲಾಗುತ್ತಿದೆ. ಮಧ್ಯಂತರದಲ್ಲಿ ಮಳೆಯಾಗುತ್ತಿದ್ದರೂ ತೊಂದರೆಯಾಗಿಲ್ಲ ಎಂದು ಕ್ಷೇತ್ರ ಅಧಿಕೃತರು ತಿಳಿಸಿದ್ದಾರೆ.

0 Comments