ಕಾಸರಗೋಡು: ರೈಲು ಹೊರಟಾಗ ಅದರಿಂದ ಜಿಗಿಯಲು ಯತ್ನಿಸಿದ ಮಹಿಳೆಯನ್ನು ಪೊಲೀಸರು ರಕ್ಷಿಸಿ ಮಂಜೇಶ್ವರದ ಆಶ್ರಮವೊಂದರಲ್ಲಿ ಆಶ್ರಯ ಕಲ್ಪಿಸಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಕಂಡುಬಂದಾಗ ಪೊಲೀಸರು ಮಂಜೇಶ್ವರ ಆಶ್ರಮಕ್ಕೆ ಮಹಿಳೆಯನ್ನು ಕರೆದೊಯ್ದರು. . ಮಹಿಳೆ ಕೊಟ್ಟಾಯಂ ಮೂಲದವಳಾಗಿದ್ದು ಹೆಸರು ಶಿಲ್ಪಾ ಎಂಬುದಾಗಿದೆ ಎಂದು ಪೊಲೀಸರು ತಿಳಿಸಿದರು. ಆಕೆ ಕಾಸರಗೋಡು ತಲುಪಿದ್ದು ಹೇಗೆ ಎಂಬುದು ಸ್ಪಷ್ಟವಾಗಿಲ್ಲ. ಮಾನಸಿಕ ಅಸ್ವಸ್ಥ ಮಹಿಳೆಯನ್ನು ಒಂಟಿಯಾಗಿ ಬಿಟ್ಟರೆ ಅಪಘಾತ ಸಂಭವಿಸುವ ಅಪಾಯವಿರುವುದರಿಂದ ಆಕೆಯನ್ನು ಆಶ್ರಮಕ್ಕೆ ಸ್ಥಳಾಂತರಿಸಲು ಪೊಲೀಸರು ನಿರ್ಧರಿಸಿದರು. ಇದರ ನಂತರ, ಎಸ್‌ಐ ಎಂ.ವಿ. ಪ್ರಕಾಶನ್, ಎಎಸ್‌ಐ ಮಹೇಶ್ ಮತ್ತು ಮಹಿಳಾ ಪೊಲೀಸ್ ಅಧಿಕಾರಿಗಳಾದ ಸುಮಿ ಮತ್ತು ಹೈರುನ್ನಿಸಾ ನೇತೃತ್ವದ ರೈಲ್ವೆ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದರು. ಈಕೆಯ ಸಂಬಂಧಿಕರು ಬಂದು ಪತ್ತೆ ಹಚ್ಚುವ ತನಕ ಆಶ್ರಮದಲ್ಲಿ ಉಳಿಸಿಕೊಳ್ಳಲಾಗುವುದೆಂದು ಪೋಲಿಸರು ತಿಳಿಸಿದ್ದಾರೆ.

0 Comments