Ticker

6/recent/ticker-posts

Ad Code

ಆರಿಕ್ಕಾಡಿ ರೈಲು ಹಳಿಯಲ್ಲಿ ಕಂಡು ಬಂದ ಮೃತದೇಹದ ಗುರುತು ಪತ್ತೆ

 

ಕುಂಬಳೆ : ಆರಿಕ್ಕಾಡಿ ರೈಲು ಹಳಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡು ಬಂದ ವ್ಯಕ್ತಿಯನ್ನು ಗುರುತು ಪತ್ತೆ ಹಚ್ಚಲಾಗಿದೆ. ಮೃತ ವ್ಯಕ್ತಿಯನ್ನು ಕೊಯಿಪ್ಪಾಡಿ ಕಡಪ್ಪುರಂ ಮೂಲದ ಆಸಿಫ್ (30) ಎಂದು ಗುರುತಿಸಲಾಗಿದೆ. ಬುಧವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ರೈಲ್ವೆ ಹಳಿಗಳ ಬಳಿ ರೈಲು ಡಿಕ್ಕಿ ಹೊಡೆದು ಯುವಕ ಮೃತಪಟ್ಟಿರುವುದು ಪತ್ತೆಯಾಗಿದೆ. ತಲೆಗೆ ತೀವ್ರ  ಪೆಟ್ಟಾಗಿ ನುಜ್ಜುಗುಜ್ಜಾಗಿರುವುದರಿಂದ ಆ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಬಳಿಕ ಕುಂಬಳೆ ಪೊಲೀಸರು ನಡೆಸಿದ ಬೆರಳಚ್ಚು ಪರೀಕ್ಷೆಯ ಮೂಲಕ ಮೃತನನ್ನು ಗುರುತಿಸಲಾಯಿತು. ಮೃತ ಯುವಕ ಅಬ್ದುಲ್ ಖಾದರ್ ಮತ್ತು ಫಾತಿಮಾ ಅವರ ಪುತ್ರರಾಗಿದ್ದು ಸಹೋದರ ಸಹೋದರಿಯರಾದ ಅರ್ಷದ್, ಕೆ.ಟಿ. ಹನೀಫ್, ಅನೀಸ್ಸಾ ಮತ್ತು ರಹಿಯಾನಾ ಎಂಬಿವರನ್ನು ಅಗಲಿದ್ದಾರೆ.

Post a Comment

0 Comments