ತಿರುವನಂತಪುರಂ: ವೃದ್ಧ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಹೋದ ಘಟನೆಗೆ ಸಂಬಂಧಿಸಿ ಯುವಕನನ್ನು ಬಂಧಿಸಲಾಗಿದೆ. ವೆಂಜರಮೂಡು ಪೊಲೀಸರು ಪ್ಲಾವೋಡ್, ವೆಲ್ಲುಮನ್ನಾಡಿಯ ನಿವಾಸಿ ಅಖಿನ್ (20) ಎಂಬಾತ ಬಂಧಿತ ಯುವಕ. ಈತ 85 ವರ್ಷದ ಮಹಿಳೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು, ಅತ್ಯಾಚಾರ ಮಾಡಿ, ಪರಾರಿಯಾಗಿದ್ದ ಎಂದು ವೆಂಜರಮೂಡು ಪೊಲೀಸರು ತಿಳಿಸಿದ್ದಾರೆ. ವೆಂಜರಮೂಡು-ಅಟ್ಟಿಂಗಲ್ ರಸ್ತೆಯ ವಲಿಯಕಟ್ಟಕ್ಕಲ್ ಬಳಿ ವೃದ್ಧೆಗೆ ತಲೆ ಮತ್ತು ಮುಖದ ಮೇಲೆ ಗಂಭೀರ ಗಾಯಗಳಾಗಿರುವುದು ಸ್ಥಳೀಯರ ಗಮನಕ್ಕೆ ಬಂದಿತ್ತು. ತಕ್ಷಣ ಆಕೆಯನ್ನು ಅಟ್ಟಿಂಗಲ್‌ನ ವಲಿಯಕುನ್ನು ಆಸ್ಪತ್ರೆಗೆ ಕರೆದೊಯ್ದರು. ಪ್ರಾಥಮಿಕ ಚಿಕಿತ್ಸೆಯ ನಂತರ, ವೃದ್ಧ ಮಹಿಳೆಯನ್ನು ಉತ್ತಮ ಚಿಕಿತ್ಸೆಗಾಗಿ ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

0 Comments