Ticker

6/recent/ticker-posts

Ad Code

ಬಿಎಲ್‌ಒಗಳ ವಿರುದ್ಧ ದೌರ್ಜನ್ಯಕ್ಕೆ ಕಠಿಣ ಕ್ರಮ : ಜಿಲ್ಲಾ ಚುನಾವಣಾ ಅಧಿಕಾರಿ

 

ಕಾಸರಗೋಡು : ಬಿಎಲ್‌ಒಗಳ  ಅಧಿಕೃತ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದರೆ ಅಥವಾ ಬೆದರಿಕೆ ಹಾಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ  ಜಿಲ್ಲಾಧಿಕಾರಿ ಕೆ.ಇಂಬಶೇಖರ್  ಹೇಳಿದ್ದಾರೆ. ನಿನ್ನೆ ಉಪ್ಪಳದಲ್ಲಿ ಎಸ್‌ಐಆರ್ ಮತದಾರರ ಪಟ್ಟಿಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾಗ ರಾಜಕೀಯ ಪಕ್ಷದ ಕಾರ್ಯಕರ್ತರೊಬ್ಬರು ಬಿಎಲ್‌ಒ ಓರ್ವರನ್ನು ತಡೆದು ಬೆದರಿಕೆ ಹಾಕಿದ್ದಾರೆ. ಬಿಎಲ್‌ಒ ತಮ್ಮ ಫೋನ್‌ನಲ್ಲಿರುವ ಎಸ್‌ಐಆರ್ ಅಪ್ಲಿಕೇಶನ್‌ನಿಂದ ಮಾಹಿತಿಯನ್ನು ತಮ್ಮ ಸ್ವಂತ ಫೋನ್ ಮತ್ತು ಇತರ ವಾಟ್ಸಾಪ್ ಗುಂಪುಗಳಿಗೆ ಹಂಚಿಕೊಂಡಿದ್ದಾರೆ ಮತ್ತು ಅವರ ಅಧಿಕೃತ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂಬ ದೂರು ಲಭಿಸಿತ್ತು. ಮಂಜೇಶ್ವರ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜಿಲ್ಲೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಎಸ್ ಐಆರ್ ಪ್ರಕ್ರಿಯೆ ಪೂರ್ಣಗೊಳಿಸಲು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಬೂತ್ ಮಟ್ಟದ ಅಧಿಕಾರಿಗಳ ವಿರುದ್ಧ ದೂರು ಬಂದರೆ, ಅದನ್ನು ನೇರವಾಗಿ ಜಿಲ್ಲಾಧಿಕಾರಿಗಳಿಗೆ ವರದಿ ಮಾಡಬೇಕು. ಬೂತ್ ಮಟ್ಟದ ಅಧಿಕಾರಿಗಳಿಗೆ ಬೆದರಿಕೆ ಅಥವಾ ಹಲ್ಲೆ ಮಾಡುವುದು ಅಪರಾಧ. ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Post a Comment

0 Comments