ಪುತ್ತಿಗೆ : ನೈಮೊಗರು ಬಾರಿಕೆ ದಿ. ಬಾಬು ರೈಯವರ ಪತ್ನಿ ಕುಡಾಲು ಭಂಡಾರಗುತ್ತು ದೇವಕಿ ರೈ (85) ನಿಧನರಾದರು. ಮೂಲತಃ ಅಂಗಡಿಮೊಗರು ಸಮೀಪದ ದೇಲಂಪಾಡಿ ನಿವಾಸಿಯಾಗಿದ್ದ ಇವರು ಪ್ರಸ್ತುತ ತಲಪಾಡಿಯಲ್ಲಿ ತನ್ನ ಮಗನ ಮನೆಯಲ್ಲಿ ವಾಸಿಸುತ್ತಿದ್ದರು. ಮೃತರು ಮಕ್ಕಳಾದ ರವೀಂದ್ರ ರೈ, ಸುಧಾಕರ ರೈ, ಕೃಷ್ಣ ರೈ, ರಾಜೇಂದ್ರ ರೈ (ಕನ್ಯಾನ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರೂ,ದೇಲಂಪಾಡಿ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ), ನಿರ್ಮಲ, ಸೊಸೆಯಂದಿರಾದ ಜಯಂತಿ ರೈ, ಬೇಬಿ, ಪ್ರೇಮ, ಸರಿತಾ, ಅಳಿಯ ಸಂತೋಷ್ ಶೆಟ್ಟಿ ತಲಪಾಡಿ ಹಾಗೂ ಅಪಾರ ಬಂಧುಗಳನ್ನಗಲಿದ್ದಾರೆ. ತಲಪಾಡಿಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

0 Comments