'ನಿರ್ವಾಣ' ಅಂದರೆ ಮೂಲತಃ ಸಂಸ್ಕೃತದಲ್ಲಿ "ನಂದಿಸುವುದು" ಎಂಬರ್ಥವಿದೆ. ಸಾವು ಎಂಬುದು ಕೇವಲ ದೇಹದ ನಾಶವಲ್ಲ.ದುಃಖ, ಆಸೆ, ದ್ವೇಷ ಮತ್ತು ಅಜ್ಞಾನದ ಬೆಂಕಿಗಳನ್ನು ನಂದಿಸಿ, ಪುನರ್ಜನ್ಮದ ಚಕ್ರದಿಂದ ಮುಕ್ತರಾಗಿ ಶಾಶ್ವತ ಶಾಂತಿ, ಸಂತೋಷ ಮತ್ತು ವಿಮೋಚನೆಯನ್ನು ಪಡೆಯುವುದು.
ನಿರ್ವಾಣವನ್ನು ಪಡೆಯುವುದು ತುಂಬಾ ಕಷ್ಟ. ಬುದ್ಧನು 80 ನೇ ವಯಸ್ಸಿನಲ್ಲಿ ಮರಣ ಹೊಂದಿದನು, ಇದನ್ನು ಮೂಲ ಮಹಾಪರಿನಿರ್ವಾಣ ಎಂದು ಕರೆಯಲಾಗುತ್ತದೆ.
ಸಂವಿಧಾನ ಶಿಲ್ಪಿ ಡಾ. ಭೀಮರಾವ್ ರಾಮ್ ಜಿ ಅಂಬೇಡ್ಕರ್ ಕೇವಲ ಮೇಧಾವಿ ಅಷ್ಟೇ ಅಲ್ಲ ಮಾನವೀಯ ಮೌಲ್ಯಗಳನ್ನು ಹೊಂದಿರುವ ಓರ್ವ ಸಮಾಜ ಸುಧಾರಕರರೂ ಆಗಿದ್ದರು.
ಡಾ. ಅಂಬೇಡ್ಕರ್ ಅವರು ತಮ್ಮ ಕೊನೆಯ ಕೃತಿ 'ದಿ ಬುದ್ಧ ಅಂಡ್ ಹಿಸ್ ಧಮ್ಮ'ವನ್ನು ಪೂರ್ಣಗೊಳಿಸಿದ ಕೆಲವೇ ದಿನಗಳ ನಂತರ ಡಿಸೆಂಬರ್ 6, 1956 ರಂದು ದೆಹಲಿಯ ತಮ್ಮ ಮನೆಯಲ್ಲಿ ನಿಧನರಾದರು. ಅಕ್ಟೋಬರ್ 14, 1956 ರಂದು ನಾಗ್ಪುರದಲ್ಲಿ 5,00,000 ಬೆಂಬಲಿಗರೊಂದಿಗೆ ವರ್ಷಗಳ ಕಾಲ ಬೌದ್ಧಧರ್ಮವನ್ನು ಅಧ್ಯಯನ ಮಾಡಿದ ನಂತರ ಅಂತಿಮವಾಗಿ ಬೌದ್ಧಧರ್ಮಕ್ಕೆ ಮತಾಂತರಗೊಂಡ ಅಂಬೇಡ್ಕರ್ ಅವರನ್ನು ಅವರ ಅನುಯಾಯಿಗಳು, ವಿಶೇಷವಾಗಿ ಅವರ ಮರಣದ ನಂತರ ಬೌದ್ಧ ನಾಯಕ ಎಂದು ಪರಿಗಣಿಸಿದ್ದರು.
ಅವರ ಪಾರ್ಥಿವ ಶರೀರವನ್ನು ಮುಂಬೈನ ದಾದರ್ ಚೌಪಟ್ಟಿಯಲ್ಲಿ ಬೌದ್ಧ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಅವರ ನಿಲುವು ಮತ್ತು ಭಾರತದಲ್ಲಿ ಅಸ್ಪೃಶ್ಯತೆಯ ನಿರ್ಮೂಲನೆಗೆ ನೀಡಿದ ಕೊಡುಗೆಗಳಿಂದಾಗಿ, ಅವರನ್ನು ಬೌದ್ಧ ಗುರು ಎಂದು ಪರಿಗಣಿಸಲಾಗಿತ್ತು. ಅವರನ್ನು ಅಂತ್ಯಕ್ರಿಯೆ ಮಾಡಿದ ಸ್ಥಳವನ್ನು ಪವಿತ್ರ ಸ್ಥಳವೆಂದು ಗುರುತಿಸಲಾಯಿತು ಮತ್ತು ಇಂದು ಅದನ್ನು ಚೈತ್ಯ ಭೂಮಿ ಎಂದು ಕರೆಯಲಾಗುತ್ತದೆ.
ಈ ದಿನದಂದು ಅಂಬೇಡ್ಕರ್ ಅವರ ಅನುಯಾಯಿಗಳು ಮತ್ತು ಇತರ ಭಾರತೀಯ ನಾಯಕರು ಚೈತ್ಯ ಭೂಮಿಯಲ್ಲಿ ಭಾರತೀಯ ಸಂವಿಧಾನದ ಪಿತಾಮಹರಿಗೆ ಗೌರವ ಸಲ್ಲಿಸುತ್ತಾರೆ.
ಚೈತ್ಯ ಭೂಮಿಯಲ್ಲಿ ನಡೆಯುವ ಆಚರಣೆಗಳು ಡಾ. ಅಂಬೇಡ್ಕರ್ ಅವರು ತಮ್ಮ ದೇಶಕ್ಕೆ ನೀಡಿದ ಸಾಂವಿಧಾನಿಕ ಮತ್ತು ಸಾಮಾಜಿಕ ಕೊಡುಗೆಗಳನ್ನು ಗುರುತಿಸುತ್ತವೆ.
ಬಾಲ್ಯದಿಂದಲೇ ಅಸ್ಪೃಶ್ಯತೆಯ ಕಾರಣವಾಗಿ ಸಾಕಷ್ಟು ಅವಮಾನಗಳನ್ನು ಅನುಭವಿಸಿದರೂ ಅದನ್ನು ಮೀರಿ ಸಂಪೂರ್ಣ ದೇಶವೇ ಅನುಸರಿಸುವಂತಹ ಸಂವಿಧಾನವನ್ನು ರಚಿಸುವ ಮೂಲಕ ಉಳಿದವರಿಗೆ ಮಾದರಿಯಾದ ಮಹಾನ್ ವ್ಯಕ್ತಿಯ ಪುಣ್ಯ ಸ್ಮರಣೆಗಾಗಿ ಡಿಸೆಂಬರ್ 6ನ್ನು ಪ್ರತಿವರ್ಷವೂ 'ಪರಿನಿರ್ವಾಣ ದಿನ'ವಾಗಿ ಆಚರಿಸಲಾಗುತ್ತದೆ.
ಸಂಗ್ರಹ

0 Comments