Ticker

6/recent/ticker-posts

Ad Code

ಪಳ್ಳಕಾನ,ಬೆದ್ರಂಪಳ್ಳ, ಪ್ರದೇಶಗಳಲ್ಲಿ ಅವೈಜ್ಞಾನಿಕ ರೀತಿಯ ಬೆಂಕಿ ಭೀತಿ

 


ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಳ್ಳಕಾನ,ಬೆದ್ರಂಪಳ್ಳ, ಪ್ರದೇಶಗಳಲ್ಲಿ ಮರಗಳನ್ನು ಸಂಸ್ಕರಿಸುವುದು ಮತ್ತು  ಅವೈಜ್ಞಾನಿಕ ರೀತಿಯ ಬೆಂಕಿ ಹೊತ್ತಿಸಿ ಮರದ ತ್ಯಾಜ್ಯಗಳನ್ನು ಸುಡುವ ಪ್ರಕ್ರಿಯೆಯಿಂದ ಸ್ಥಳೀಯರು ಸಂಕಷ್ಟಕ್ಕೊಳಗಾಗಿದ್ದಾರೆ. ರಾತ್ರಿ ಹಗಲೆನ್ನದೆ ಯಾವುದೇ ಮುಂಜಾಗರೂಕತೆಗಳನ್ನು ಪಾಲಿಸದೆ ಬೆಂಕಿ ಉರಿಸುವ ಈ ಪ್ರಕ್ರಿಯಿಂದ ಸ್ಥಳೀಯ ಪ್ರದೇಶಗಳಲ್ಲಿ ದಟ್ಟೈಸಿದ ಹೊಗೆ ಪಸರಿಸುತ್ತಿದ್ದು ಮನೆಗಳಲ್ಲಿನ ಮಕ್ಕಳ ಸಹಿತ ಮಹಿಳೆಯರಿಗೆ ಅನಾರೋಗ್ಯ ಸಮಸ್ಯೆಗಳು ಉಲ್ಬಣವಾಗ ತೊಡಗಿದೆ. ಇದರ ವಿರುದ್ಧ ಸ್ಥಳೀಯರು ರಂಗಕ್ಕಿಳಿಯಲು ನಿರ್ಧರಿಸಿದ್ದಾರೆ.

ದಿನವೂ ಇಲ್ಲಿಗೆ ಎಲ್ಲಿಯೋ ಕಡಿದ ಮರಗಳನ್ನು‌  ತಂದು ಸಂಸ್ಕರಿಸುವ ಕಾರ್ಯ ಮುಂದುವರಿಯುತ್ತಿದ್ದು ಇದರಲ್ಲಿ ಉಂಟಾಗುವ ತ್ಯಾಜ್ಯಗಳನ್ನು ಸಂಜೆಯಾಗುತ್ತಿದ್ದಂತೆ ರಾಶಿ ಹಾಕಿ ಬೆಂಕಿ ಹಚ್ಚಿ ಸುಡಲಾಗುತ್ತದೆ. ಪರ್ವತದ ಗುಡ್ಡೆಯಕಾರದಲ್ಲಿ ಸಂಗ್ರಹವಾಗುವ ಈ ತ್ಯಾಜ್ಯಗಳು ರಾತ್ರಿ ಪೂರ್ತಿ ಉರಿಯುತ್ತಿದ್ದು ದಟ್ಟ ಹೊಗೆ ಪರಿಸರ ಪ್ರದೇಶಗಳಿಗೆ ಹರಡುತ್ತಿದೆ. ಈ ಪ್ರದೇಶದಲ್ಲಿ ಹೆಚ್ಚಿನ‌ ಭಾಗಗಳಲ್ಲಿಯೂ ಮುಳಿ ಹುಲ್ಲಿನ ಹಿತ್ತಿಲುಗಳೇ ಅಧಿಕ ಇದ್ದು ಅವೈಜ್ಞಾನಿಕ ರೀತಿಯಲ್ಲಿ ಬೆಂಕಿ ಹಚ್ಚುವ ಕಾರಣ ಸುತ್ತಲು ಸುಡುವ ಭೀತಿ ಇದೆ. ಇದರಿಂದಾಗಿ ಪರಿಸರ ವಾಸಿಗಳು ಭೀತಿಯಿಂದಲೇ ರಾತ್ರಿ ಕಳೆಯುವಂತಾಗಿದೆ. ಯಾವುದೇ ಕಡಿವಾಣ ಇಲ್ಲದೆ ರಾತ್ರಿ ಹಗಲೆನ್ನದೆ ಇಲ್ಲಿ ಮರ ಸಂಸ್ಕರಿಸುವ ಕಾರ್ಯ ನಡೆಯುತ್ತಿದ್ದು ಯಂತ್ರದ ಶಬ್ದಗಳು ಕೂಡ ಇಲ್ಲಿನ ನಿವಾಸಿಗಳ ನಿದ್ದೆಗೆಡಿಸಿವೆ.ಎಲ್ಲಿಂದಲೋ ಬಂದವರು ಇಲ್ಲಿಗೆ  ಮರಗಳನ್ನು ಕಡಿದು ತಂದು ಸಂಸ್ಕರಿಸಿ ದೂರದ ಊರಿಗೆ ರವಾನಿಸುವ ಕಾರ್ಯ ನಡೆಯುತ್ತಿದ್ದು ಇದು ಪರಿಸರಕ್ಕೆ ಮಾರಕವಾಗಿದೆ.  ಇದನ್ನು ತಡೆಗಟ್ಟಿ ಸ್ವಾಸ್ಥ್ಯರಾಗಿ ವಾಸಿಸಲು ಅನುವು ಮಾಡಿಕೊಡಬೇಕೆಂದು ಅಗ್ರಹಿಸಿ ಇದೀಗ ಇಲ್ಲಿನ ಪರಿಸರವಾಸಿಗಳು ಒಟ್ಟಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ತಿಳಿಸಿದರು ಕೂಡ ಯಾವುದೇ ಕ್ರಮಕೈಗೊಳ್ಳದಿದ್ದು ಇದರ ವಿರುದ್ಧ ಪರಿಸರವಾದಿಗಳು  ಹೋರಾಟಕ್ಕಿಳಿಯುವುದಾಗಿ ತಿಳಿಸಿದ್ದಾರೆ. ಈ ಹಿಂದೊಮ್ಮೆ ಎಂಡೋಸಲ್ಫನ್ ಎಂಬ ವಿಪತ್ತು ಸಂಭವಿಸಿದ ಭೂಮಿಯಲ್ಲಿ ಇನ್ನೊಂದು ಮಾರಕ ಪರಿಸರ ನಿರ್ಮಾಣಕ್ಕೆ ದಾರಿಯಾಗಿಸುವಲ್ಲಿ ಇಲ್ಲಿನ ಅಧಿಕೃತವರ್ಗವೂ ಕಣ್ಣಿದ್ದು ಕುರುಡಾಗಿರುವುದು ನಾಡಿನ ಮಹಾ ದುರಂತ ಎಂದು ಜನರಾಡಿಕೊಳ್ಳುತ್ತಿದ್ದಾರೆ.

Post a Comment

0 Comments