Ticker

6/recent/ticker-posts

Ad Code

ಇಂದು ಮಧ್ಯರಾತ್ರಿಯವರೆಗೆ ಎಲ್ಲಾ ಇಂಡಿಗೋ ದೇಶೀಯ ವಿಮಾನಗಳ ಹಾರಾಟ ರದ್ದು

 

ನವದೆಹಲಿ : ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ  ಉಂಟಾಗಿರುವ ಅಡಚಣೆ ಸತತ 5ನೇ ದಿನಕ್ಕೆ ಕಾಲಿಟ್ಟಿದೆ. ತಾಂತ್ರಿಕ ಸಮಸ್ಯೆ ಹಾಗೂ ಕಾರ್ಯಾಚರಣೆ ದೋಷಗಳಿಂದ ಇಂದು ಕೂಡ ನೂರಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ (ಇಂದು) ಮಧ್ಯರಾತ್ರಿ ವರೆಗೆ ಎಲ್ಲಾ ಇಂಡಿಗೋ ದೇಶೀಯ ವಿಮಾನಗಳ  ಹಾರಾಟವನ್ನು  ಸಂಪೂರ್ಣ ರದ್ದುಗೊಳಿಸಿರುವುದಾಗಿ ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ. ಹಠಾತ್ತನೇ ಫ್ಲೈಟ್‌ ರದ್ದಾದ ವಿಷಯ ತಿಳಿದ ಪ್ರಯಾಣಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಪ್ರಯಾಣಿಕರು ಹಾಗೂ ಏರ್‌ಪೋರ್ಟ್‌ ಸಿಬ್ಬಂದಿ ನಡುವೆ ವಾಗ್ವಾದವೂ ಉಂಟಾಗಿದೆ. 

ಇಂದು ಮಧ್ಯರಾತ್ರಿ 11:59ರ ವರೆಗೆ ಎಲ್ಲಾ ಇಂಡಿಗೋ ದೇಶಿಯ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ಇಲ್ಲಿಂದ ನಿರ್ಗಮಿಸಬೇಕಿರುವ ಪ್ರಯಾಣಿಕರು ಏರ್‌ಪೋರ್ಟ್‌ಗೆ ಬಾರದಂತೆ ಮನವಿ ಮಾಡಿದ್ದಾರೆ. ಇಂಡಿಗೋ ಇಂದು ಒಂದೇ ದಿನ ಬೆಂಗಳೂರು, ದೆಹಲಿ, ಹೈದರಾಬಾದ್‌ ಹಾಗೂ ಇತರ ಏರ್‌ಪೋರ್ಟ್‌ಗಳಿಂದ ಒಟ್ಟು 700 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. 

Post a Comment

0 Comments