Ticker

6/recent/ticker-posts

Ad Code

ವಿದ್ಯುತ್ ಪ್ರಾಯೋಗಿಕ ಪ್ರವಹಿಸಿಸುವ ಕಾರಣ ಕಾಸರಗೋಡು ಸಾರ್ವಜನಿಕರಿಗೆ ಎಚ್ಚರಿಕೆಯ ಮಾಹಿತಿ

 

ಕಾಸರಗೋಡು :  ಕೆಎಸ್‌ಇಬಿ ಲಿಮಿಟೆಡ್‌ನ ಟ್ರಾನ್ಸ್‌ಗ್ರಿಡ್ ಯೋಜನೆಯ ಭಾಗವಾಗಿ  ಜಿಲ್ಲೆಯಲ್ಲಿ ನಿರ್ಮಿಸಲಾದ ಹೊಸ ಟ್ರಾನ್ಸ್ ಫರ್ಮರ್ ಮೂಲಕ ಡಿ. 6 ರಿಂದ ಪ್ರಾಯೋಗಿಕ ಆಧಾರದ ಮೇಲೆ ವಿದ್ಯುತ್ ಪ್ರವಹಿಸಲಿದೆ. ಅಂಬಲತ್ತರ ಸಬ್‌ಸ್ಟೇಷನ್‌ನಿಂದ ಮೈಲಾಟ್ಟಿ ಸಬ್‌ಸ್ಟೇಷನ್‌ ವರೆಗೆ ನಿರ್ಮಿಸಲಾದ 220/110 ಕೆವಿ ಮಲ್ಟಿ-ಸರ್ಕ್ಯೂಟ್ ಮಲ್ಟಿ-ವೋಲ್ಟೇಜ್ ಲೈನ್‌ನ 110 ಕೆವಿ ಅಂಬಲತ್ತರ-ಮೈಲಾಟ್ಟಿ ಮಾರ್ಗದಲ್ಲಿ ವಿದ್ಯುತ್ ಹರಿಯಲಿದೆ. ಈ ನಿಟ್ಟಿನಲ್ಲಿ ಕೆಎಸ್‌ಇಬಿ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಡಿ. 6 ರಂದು ಬೆಳಿಗ್ಗೆ 10 ಗಂಟೆಯಿಂದ ಯಾವುದೇ ಸಮಯದಲ್ಲಿ ಈ ಮಾರ್ಗದ ಮೂಲಕ ವಿದ್ಯುತ್ ಹರಿಯಲು ಪ್ರಾರಂಭವಾಗುವ ಸಾಧ್ಯತೆಯಿದೆ. ಆದ್ದರಿಂದ, ಈ ಮಾರ್ಗ ಹಾದುಹೋಗುವ ಪ್ರದೇಶಗಳಲ್ಲಿನ ಸಾರ್ವಜನಿಕರು ಅತ್ಯಂತ ಜಾಗರೂಕರಾಗಿರಲು ಕೆಎಸ್‌ಇಬಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Post a Comment

0 Comments