ಪೆರ್ಲ : ಕುರೆಡ್ಕ ನಿವಾಸಿ ಕಿರಣ್ (33) ಎಂಬ ಯುವಕ ನಾಪತ್ತೆಯಾಗಿದ್ದಾರೆ. ಶ್ರವಣ ಮತ್ತು ಮಾತಿನ ದೋಷ ಹೊಂದಿರುವ ಈ ಯುವಕ ಡಿ. 4ರಂದು ಬೆಳಗ್ಗೆ 8ಗಂಟೆಯ ನಂತರ ಪೆರ್ಲ ಕುರೆಡ್ಕದಿಂದ ಕಾಣೆಯಾಗಿರುವುದಾಗಿ ತಿಳಿಸಲಾಗಿದೆ. ಜೀನ್ಸ್ ಮತ್ತು ಶರ್ಟ್ ಧರಿಸಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವಕನನ್ನು ಕಂಡವರು SHO : 9497947260, ಅಥವಾ ಬದಿಯಡ್ಕ ಎಸ್‌ಐ ಪೊಲೀಸ್ ಠಾಣೆ : 9497980914 ಇವರಿಗೆ ಮಾಹಿತಿ ನೀಡಲು ಕೋರಲಾಗಿದೆ.

0 Comments