Ticker

6/recent/ticker-posts

Ad Code

ಅನ್ನಪೂರ್ಣೇಶ್ವರೀ ಉನ್ನತ ಪ್ರೌಢಶಾಲೆ ಅಗಲ್ಪಾಡಿಯಲ್ಲಿ ಪ್ರೇರಣಾ ತರಗತಿ

 

ಶ್ರೀ ಅನ್ನಪೂರ್ಣೇಶ್ವರೀ ಉನ್ನತ ಪ್ರೌಢಶಾಲೆ ಅಗಲ್ಪಾಡಿಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪ್ರೇರಣಾ ತರಗತಿಯನ್ನು ನಡೆಸಲಾಯಿತು. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಣ ತಜ್ಞರಾದ ಶ್ರೀಯುತ ಸೂರ್ಯನಾರಾಯಣ ಭಟ್ ಸೈಪಂಗಲ್ಲು ಸಂಪನ್ಮೂಲ ವ್ಯಕ್ತಿಗಳಾಗಿ ತರಗತಿಯನ್ನು ನಡೆಸಿಕೊಟ್ಟರು. ಮುಂಬರುವ  ಮಾದರಿ ಪರೀಕ್ಷೆಗಳು, ಪಬ್ಲಿಕ್ ಪರೀಕ್ಷೆಗಳು, ಅದಕ್ಕಾಗಿ ನಡೆಸಬೇಕಾದ ತಯಾರಿ, ಗೊಂದಲ ,ಪರೀಕ್ಷಾಭಯ, ಆತಂಕ, ಏಕಾಗ್ರತೆಯ ಕೊರತೆ ಇತ್ಯಾದಿ  ಹಲವು ಸಮಸ್ಯೆಗಳಿರುವಂತಹ ಮಕ್ಕಳಿಗಾಗಿ ವಿಶೇಷವಾಗಿ ಆಯೋಜಿಸಿದ ತರಗತಿಯಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸಿದರು. ಕಷ್ಟ, ತೊಂದರೆಗಳನ್ನು ಮೆಟ್ಟಿನಿಂತು ಜೀವನದಲ್ಲಿ ಉನ್ನತ ಮಟ್ಟಕ್ಕೇರಿದ ಹಲವಾರು ವ್ಯಕ್ತಿಗಳ ಪರಿಚಯದೊಂದಿಗೆ ತರಗತಿಯನ್ನು ಪ್ರಾರಂಭಿಸಿದರು. ಪರೀಕ್ಷೆಯ ಸೋಲಿನ ಭಯಕ್ಕೆ ಕಾರಣಗಳು, ಏಕಾಗ್ರತೆಯನ್ನು ಹೆಚ್ಚಿಸುವ ವಿಧಾನಗಳು, ಗೊಂದಲವನ್ನು ಪರಿಹರಿಸುವ ರೀತಿಗಳು, ಸ್ಮರಣಶಕ್ತಿಯನ್ನು ಹೆಚ್ಚಿಸುವ ವಿಧಾನಗಳು ಇತ್ಯಾದಿಗಳನ್ನು ಸ್ಲೈಡ್ ಶೋ ಮೂಲಕ ವಿವರಿಸಿದರು.  ಸಾಧಿಸಬಹುದಾದ ನಿಖರವಾದ ಗುರಿಯ ಕಡೆಗೆ ಸಮಯ ಬಂಧಿತವಾಗಿ ಮುಂದುವರಿಯುವ ರೀತಿಯನ್ನು ಮಕ್ಕಳ ಮನಮುಟ್ಟುವಂತೆ  ಎಸ್ ಎನ್ ಭಟ್ ಸೈಪಂಗಲ್ಲು ವಿವರಿಸಿದರು. ಪರೀಕ್ಷಾ ಭಯವನ್ನು ತೊಲಗಿಸುವ  ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವ ಚಟುವಟಿಕೆಗಳು, ಓದನ್ನು ಸಮಯ  ಬಂಧಿತವಾಗಿ ನಿರ್ವಹಿಸಲು ಸಹಕಾರಿಯಾಗುವ  ಪೊಮಾಡೋರೋ ತಂತ್ರ ಮುಂತಾದವುಗಳು ಮಕ್ಕಳಿಗೆ ಮನೋರಂಜನೆಯನ್ನು ನೀಡಿದವು. ಕಾರ್ಯಕ್ರಮದ ಕೊನೆಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮಕ್ಕಳಿಗೆ ಪುಸ್ತಕವನ್ನು ಉಡುಗೊರೆಯಾಗಿ ನೀಡುವುದರ ಮೂಲಕ ಪ್ರೋತ್ಸಾಹಿಸಿದರು.

ಹಿರಿಯ ಆಧ್ಯಾಪಿಕೆ  ಸವಿತಾ ಎಸ್  ಸ್ವಾಗತಿಸಿ,  ಹರಿನಾರಾಯಣ ಎಸ್ ವಂದಿಸಿದರು. ಅಧ್ಯಾಪಕ- ಅಧ್ಯಾಪಕೇತರ ವೃಂದ ಸಹಕರಿಸಿದರು.

Post a Comment

0 Comments