Ticker

6/recent/ticker-posts

Ad Code

ಇಂದು ಇತಿಹಾಸ ಪ್ರಸಿದ್ಧ ಕುಂಬಳೆ ಬೆಡಿ : ಪೋಲಿಸ್ ಭದ್ರತೆ, ಸಿಸಿ ಕ್ಯಾಮರಾ ಕಣ್ಗಾವಲು

 

ಕುಂಬಳೆ : ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಜನ ಸಾಗರ ಎಲ್ಲೆಡೆಯಿಂದ ಹರಿದು ಬರುತ್ತಿದ್ದು, ತುಳುನಾಡಿನ ಇತಿಹಾಸ ಪ್ರಸಿದ್ಧ "ಕಣ್ಯಾರ ಬೆಡಿ" ಉತ್ಸವವು (ಜನವರಿ 17ರ ಶನಿವಾರ) ಇಂದು ರಾತ್ರಿ ನಡೆಯಲಿದೆ.

ಬೆಡಿ ಮಹೋತ್ಸವದ ಅಂಗವಾಗಿ  ಸಂಜೆಯಿಂದ ಚಿರಂಜೀವಿ ಕುಂಬಳೆ ಆಯೋಜನೆಯಲ್ಲಿ ಸುಪ್ರಸಿದ್ಧ ಗಾಯಕ ಗಾಯಕಿಯರ ಮ್ಯೂಸಿಕಲ್ ನೈಟ್ ಕಾರ್ಯಕ್ರಮ‌ ಜರಗಲಿದೆ. ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್, ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕ ಎಕೆಎಂ ಅಶ್ರಫ್, ಎನ್.ಎ.ನೆಲ್ಲಿಕುನ್ನು, ಸಿ.ಎಚ್.ಕುಂಞಂಬು, ರಾಜ್ ಗೋಪಾಲ್, ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಮತ್ತಿತರರು ಪಾಲ್ಗೊಳ್ಳುವರು.

ಬೆಡಿ ಪ್ರದರ್ಶನದಂಗವಾಗಿ ಅಗ್ನಿಶಾಮಕ ದಳ ಮತ್ತು ಪೊಲೀಸರು ಕಟ್ಟುನಿಟ್ಟಿನ ಭದ್ರತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದಾರೆ. ಭದ್ರತೆಗಾಗಿ ಎಸ್‌ಪಿ ನೇತೃತ್ವದಲ್ಲಿ ಸುಮಾರು 200 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ, ಸಿಸಿ  ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

Post a Comment

0 Comments