Ticker

6/recent/ticker-posts

Ad Code

ನಾಳೆಯಿಂದ ಆರಿಕ್ಕಾಡಿ ಟೋಲ್ ಸಂಗ್ರಹ ವಿರೋಧಿಸಿ ಅನಿಶ್ಚಿತಾವಧಿ ರಿಲೇ ಸತ್ಯಾಗ್ರಹ

 

ಕುಂಬಳೆ : ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಝದಲ್ಲಿ ಸೋಮವಾರದಿಂದ ಟೋಲ್ ಶುಲ್ಕ ವಸೂಲಿ ಆರಂಭಗೊಂಡಿರುವುದನ್ನು ಪ್ರತಿಭಟಿಸಿ ನಾಗರಿಕ ಕ್ರಿಯಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗಿನಿಂದ ಅನಿಶ್ಚಿತಾವಧಿ ರಿಲೇ ಸತ್ಯಾಗ್ರಹ ಆರಂಭಗೊಳ್ಳಲಿದೆಯೆಂದು ಟೋಲ್ ವಿರೋಧಿ ಕ್ರಿಯಾಸಮಿತಿ ಘೋಷಿಸಿದೆ. ಸತ್ಯಾಗ್ರಹಕ್ಕೆ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ನೇತೃತ್ವ ನೀಡಲಿದ್ದು, ಕಾಸರಗೋಡು-ಮಂಜೇಶ್ವರ ಉಭಯ ತಾಲೂಕುಗಳ ಜನರ ಜನಾಂದೋಲನವಾಗಿ ಈ ಹೋರಾಟ ಮಾರ್ಪಡಿಸಲಾಗುವುದೆಂದು ಕ್ರಿಯಾ ಸಮಿತಿ ಪ್ರಕಟಿಸಿದೆ.

Post a Comment

0 Comments