ವರ್ಕಾಡಿ : ಬೋಳದ ಪದವು ಶ್ರೀ ಬ್ರಹ್ಮ ಮುಗೇರ ಮತ್ತು ಕೊರಗಜ್ಜ ಗುಳಿಗ ದೈವಗಳ ಸಾನಿಧ್ಯಗಳ ನೇಮೋತ್ಸವವು ಮಾರ್ಚ್ 29ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ವರ್ಕಾಡಿ ಸಂತೋಷ್ ತಂತ್ರಿಯವರು ಕ್ಷೇತ್ರದ ವಠಾರದಲ್ಲಿ ಬಿಡುಗಡೆಗೊಳಿಸಿದರು. ಸಭಾಧ್ಯಕ್ಷತೆಯನ್ನು ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ವಿಶ್ವನಾಥ ರೈ ಅಡ್ಕ ವಹಿಸಿದ್ದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ರವಿ ಮುಡಿಮಾರು, ಕೋಶಾಧಿಕಾರಿ ಮನೋಜ್ ಭಂಡಾರ ಮನೆ ವರ್ಕಾಡಿ, ಗೌರವ ಸಲಹೆಗಾರರಾದ ಮೋಹನ್ ದಾಸ್ ಶೆಟ್ಟಿ ನೆತ್ತಿಲ ಬಾಳಿಕೆ, ಕ್ಷೇತ್ರದ ಸೇವಾ ಸಮಿತಿಯ ಗೌರವಾಧ್ಯಕ್ಷ ಶೀನ ಬೋಳದ ಪದವು, ಪಚ್ಚಿಲಂಪಾರೆ ಬ್ರಹ್ಮ ಮುಗೇರ ದೈವಸ್ಥಾನದ ಧರ್ಮದರ್ಶಿ ಬಾಬು ಪಚ್ಚಿಲಂಪಾರೆ, ನಿವೃತ್ತ ಶಿಕ್ಷಕ ರಾಮ ಮಾಸ್ಟರ್ ದಡ್ಡಂಗಡಿ, ಸೇವಾಸಮಿತಿ ಅಧ್ಯಕ್ಷ ಸಂಜೀವ ಬೋಳದ ಪದವು, ತನ್ನಿಮಾನಿಗ ಮಹಿಳಾ ಸಮಿತಿಯ ಅಧ್ಯಕ್ಷೆ ಲಲಿತ ಬೋಳದಪದವು, ಅಲ್ಲದೆ ಆಡಳಿತ ಮಂಡಳಿ ಹಾಗೂ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ನೇಮೋತ್ಸವದಂಧು ಬೆಳಿಗ್ಗೆ 9:00ಗಂಟೆಗೆ ಸ್ಥಳ ಶುದ್ದಿ, ಚಪ್ಪರ ಮಹೂರ್ತ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸ್ಥಳೀಯ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಸಂಜೆ 5:00ಕ್ಕೆ ಭಂಡಾರ ಏರಿ ಗುಳಿಗ ಕೋಲ, 8:30ಕ್ಕೆ ಕೊರಗಜ್ಜ ಕೋಲ, ನಂತರ ಅನ್ನಸಂತರ್ಪಣೆ. ರಾತ್ರಿ 10 ಗಂಟೆಗೆ ಬ್ರಹ್ಮ ಮುಗೇರ ತನ್ನಿಮಾನಿಗ ನೇಮೋತ್ಸವ ನಡೆಯಲಿರುವುದು .

0 Comments