Ticker

6/recent/ticker-posts

Ad Code

ಕಾಞಂಗಾಡ್‌ನಲ್ಲಿ ಸಹಕಾರಿ ಬ್ಯಾಂಕ್ ಉದ್ಯೋಗಿ ರೈಲಿಗೆ ಸಿಲುಕಿ ಸಾವು; ಆತ್ಮಹತ್ಯೆ ಎಂಬ ಶಂಕೆ

ಕಾಞಂಗಾಡ್ : ಸಹಕಾರಿ ಬ್ಯಾಂಕ್ ಉದ್ಯೋಗಿಯೊಬ್ಬರು ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿರುವುದು ವರದಿಯಾಗಿದ್ದು ಇದು ಆತ್ಮಹತ್ಯಾ  ಯತ್ನವೆಂಬ ಶಂಕೆಯುಂಟಾಗಿದೆ ಎಂದು ಪೋಲಿಸರು ಸಂಶಯ ವ್ಯಕ್ತಪಡಿಸಿದ್ದಾರೆ. ಮೃತರನ್ನು ಪುಲ್ಲೂರ್ ಸೇವಾ ಸಹಕಾರಿ ಬ್ಯಾಂಕ್ ಉದ್ಯೋಗಿ ಕೊಡವಲಂ ಪತ್ತರ್ ಕಂದಮ್‌ನ ಎಂ. ನಿಧೀಶ್ (35) ಎಂದು ಗುರುತಿಸಲಾಗಿದೆ. ಕುಶಾಲ್ ನಗರ ಪಟ್ಟಾಯಪುರ ಬಳಿ ಮೃತದೇಹ  ಪತ್ತೆಯಾಗಿತ್ತು.

ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ನಿಧೀಶ್ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿರುವುದು ಪತ್ತೆಯಾಗಿದೆ. ಯುವಕನ ಮೃತದೇಹ ಪತ್ತೆಯಾಗಿರುವ ಸ್ಥಳ ಅವರ ಮನೆಯಿಂದ ದೂರದಲ್ಲಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಇದು ಆತ್ಮಹತ್ಯೆ ಎಂಬ ಸಂಶಯ ತಾಳಲಾಗಿದೆ. ತಂದೆ ದಿವಂಗತ ನಿಟ್ಟೂರು ಕುಂಞಿರಾಮನ್, ತಾಯಿ ಬಾಲಮಣಿ, ಪತ್ನಿ ವೀಣಾ (ಕವ್ವಾಯಿ), ಮಗ ನಿವಾನ್ ಎಂಬಿವರನ್ನಗಲಿದ್ದಾರೆ.

Post a Comment

0 Comments