ಅಡೂರು : ಮಹಾರಾಷ್ಟ್ರದಿಂದ ಹಿಂತಿರುಗುತ್ತಿದ್ದ ಅಡೂರು ಮೂಲದ ವ್ಯಕ್ತಿಯೋರ್ವ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಲಾಗಿದೆ. ಅಡೂರು ಮಂಡಲ್‌ಪೆಟ್ಟಿಯ ನಾರಾಯಣನ್ ಅವರ ಪುತ್ರ ರಮೇಶನ್ (22) ನಾಪತ್ತೆಯಾದ ಯುವಕ. ರಬ್ಬರ್ ಟ್ಯಾಪಿಂಗ್ ಕೆಲಸಗಾರನಾದ ರಮೇಶ ಎರಡು ವಾರಗಳ ಹಿಂದೆ ಕೆಲಸದ ನೆಪದಲ್ಲಿ ಮಹಾರಾಷ್ಟ್ರಕ್ಕೆ ಹೋಗಿದ್ದ. ಒಂದು ವಾರದ ನಂತರ ಮನೆಗೆ ಹಿಂತಿರುಗುತ್ತಿದ್ದ ಯುವಕ ಮಂಗಳೂರಿನಲ್ಲಿ ನಾಪತ್ತೆಯಾಗಿದ್ದ. ರಮೇಶನ್ ಅವರ ಬಳಿ ಸ್ವಂತ ಫೋನ್ ಇಲ್ಲ. ಅವರು ಬೇರೆ ಫೋನ್‌ನಲ್ಲಿ ಮನೆಗೆ ಕರೆ ಮಾಡಿ ಮಂಗಳೂರಿಗೆ ತಲುಪಿರುವುದಾಗಿ ತಿಳಿಸಿದ್ದರು. ಆದರೆ ಅವರು ಮನೆಗೆ ತಲುಪಲಿಲ್ಲ. ಅವರ ಸಹೋದರಿ ಶ್ಯಾಮಲಾ ನೀಡಿದ ದೂರಿನ ಮೇರೆಗೆ ಅಡೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

0 Comments