ಪೆರ್ಲ : ಕಾಟುಕುಕ್ಕೆ ಸಮೀಪದ ಅರೆಕ್ಕಾಡಿಯಲ್ಲಿ ಅನೇಕ ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದ ಪ್ರಸಿದ್ಧ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶ ಮತ್ತು ಶ್ರೀ ದೈವಗಳ ನರ್ತನೋತ್ಸವ ಬ್ರಹ್ಮಶ್ರೀ ಕೀಕಾಂಗೋಡು ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜ.17ರಿಂದ ಜ.20ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಅರೆಕ್ಕಾಡಿ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ಟ್ರಸ್ಟ್ ಮತ್ತು ಜೀರ್ಣೋದ್ಧಾರ ಸಮಿತಿಯ ನೇತೃತ್ವದಲ್ಲಿ ಊರ ಪರವೂರ ಭಕ್ತರ ಸಹಾಯದಿಂದ ದೈವಸ್ಥಾನದ ಜೀರ್ಣೋದ್ಧಾರ ಕೆಲಸ ಕಾರ್ಯಗಳು ನಡೆದಿದೆ.
ಜ.17ಕ್ಕೆ ರಾತ್ರಿ 7.30 ರಿಂದ ಅಘಮರ್ಷಣ ಹೋಮ, ಸುದರ್ಶನ ಹೋಮ, ಆವಾಹನೆ, ಉಚ್ಚಾಟನೆ, ಪ್ರಸಾದ ಭೋಜನ. ಜ18 ಆದಿತ್ಯವಾರ ರಾತ್ರಿ 7ರಿಂದ ಪ್ರಾಸಾದ ಪರಿಗ್ರಹ, ಬಿಂಬ ಪರಿಗ್ರಹ, ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ರಕ್ಟೋಘ್ನ ಹೋಮ, ವಾಸ್ತುಬಲಿ, ಅನುಜ್ಞ, ಶಯನ ಇತ್ಯಾದಿ, ಪ್ರಸಾದ ಭೋಜನ. ಜ.19 ಸೋಮವಾರ ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, ಬಿಂಬಶುದ್ಧಿ, ಬೆಳಗ್ಗಿನ 10.46 ಗಂಟೆಯ ಮೀನ ಲಗ್ನದಲ್ಲಿ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ಸಾನ್ನಿಧ್ಯ ಪ್ರತಿಷ್ಠೆ, ಜೀವ ಕಲಶಾಭಿಷೇಕ ಸಾನ್ನಿಧ್ಯ ಕಲಶಾಭಿಷೇಕ, ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ. ಮಧ್ಯಾಹ್ನದ ಪ್ರಸಾದ ಭೋಜನ ಜರಗಲಿದೆ. ಜ. 20 ಮಂಗಳವಾರ ಬೆಳಗ್ಗೆ 9.30 ರಿಂದ ಶ್ರೀ ಧೂಮಾವತಿ ದೈವದ ಕೋಲ, ಪ್ರಸಾದ ವಿತರಣೆ, ಮಧ್ಯಾಹ್ನ ಪ್ರಸಾದ ಭೋಜನ, ಬಳಿಕ ಗುಳಿಗ ಕೋಲದೊಂದಿಗೆ ಸಂಪನ್ನಗೊಳ್ಳಲಿದೆ.

0 Comments