Ticker

6/recent/ticker-posts

Ad Code

ಶಿವಮೊಗ್ಗ ನಿವಾಸಿ ಪುತ್ತಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ

 

ಕುಂಬಳೆ: ಮರ ಕಟ್ಟಿಂಗ್  ಕಾರ್ಮಿಕನೋರ್ವನ ಮೃತದೇಹ ಆತ ವಾಸಿಸುವ ಬಾಡಿಗೆ ಕೊಠಡಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೂಲತಃ ಕರ್ನಾಟಕದ ಶಿವಮೊಗ್ಗ ಮೂಲದ ರಿಜ್ವಾನ್ ಅಲಿ(32) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಪುತ್ತಿಗೆ ಪಂಚಾಯತ್ ಕಚೇರಿ ಬಳಿಯ ಕ್ವಾರ್ಟರ್ಸ್ ನಿವಾಸಿ ರಿಜ್ವಾನ್ ಅಲಿ ಮರ ಕಡಿಯುವ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ರಾತ್ರಿ ಪತ್ನಿ ಶಮೀಮಾ ಬಾನೋಗೆ ವಿಡಿಯೋ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಎನ್ನಲಾಗಿದೆ. ನಂತರ ಪತ್ನಿ ಮತ್ತೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪರಿಚಯಸ್ಥರಿಗೆ ಮಾಹಿತಿ ತಿಳಿದಾಗ, ರಿಜ್ವಾನ್ ಅಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಅವರನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅವರ ಜೀವ ಉಳಿಸಲಾಗಲಿಲ್ಲ. ಘಟನೆಯ ಬಗ್ಗೆ ತಿಳಿದು ಇಂದು ಬೆಳಿಗ್ಗೆ ಅವರ ಪತ್ನಿ ಮತ್ತು ಸಂಬಂಧಿಕರು ಕುಂಬಳೆಗೆ ತಲುಪಿದ್ದು  ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಊರಿಗೆ  ಕೊಂಡೊಯ್ಯಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ.

Post a Comment

0 Comments