ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮಾಲೀಕ, ಮಲಯಾಳಿ ಉದ್ಯಮಿ ಮತ್ತು ಚಲನಚಿತ್ರ ನಿರ್ಮಾಪಕ ಸಿ.ಜೆ ರಾಯ್ (57) ಸ್ವತಃ ಗುಂಡು ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇನ್ನೂ ನಿಗೂಢವಾಗಿ ಉಳಿದಿದ್ದು ಕುಟುಂಬವು ಆದಾಯ ತೆರಿಗೆ ಅಧಿಕಾರಿ ಮೇಲೆ ದೂರು ನೀಡಿದೆ. ಶುಕ್ರವಾರ ಮಧ್ಯಾಹ್ನ 3.15 ರ ಸುಮಾರಿಗೆ ಅಶೋಕ್ ನಗರದಲ್ಲಿರುವ ಕಂಪೆನಿಯ ಪ್ರಧಾನ ಕಚೇರಿಯಲ್ಲಿ ಆದಾಯ ತೆರಿಗೆ ದಾಳಿ ನಡೆದ ಸಂದರ್ಭದಲ್ಲಿ ಸಿ.ಜೆ ರಾಯ್ ತನ್ನದೇ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಸಿ.ಜೆ ರಾಯ್ ಗುರುವಾಯೂರು ಮೂಲದವರು. ತೆರಿಗೆ ವಂಚನೆ ಆರೋಪದ ನಂತರ ಆದಾಯ ತೆರಿಗೆ ಇಲಾಖೆ ಮೊನ್ನೆಯಿಂದ ಅವರ ಕಚೇರಿಗಳು ಮತ್ತು ನಿವಾಸಗಳಲ್ಲಿ ವ್ಯಾಪಕ ಶೋಧ ನಡೆಸಿತ್ತು. ಅವರು ಕೇರಳ ಮತ್ತು ಗಲ್ಫ್ ಒಳಗೆ ಮತ್ತು ಹೊರಗೆ ಅನೇಕ ಉದ್ಯಮಗಳನ್ನು ಹೊಂದಿರುವ ವ್ಯಕ್ತಿ. ಸಿ.ಜೆ ರಾಯ್ ಆದಾಯ ತೆರಿಗೆ ಸಂಸ್ಥೆಯ ವಿರುದ್ಧ ಹಲವಾರು ಬಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ಸಿ.ಜೆ ರಾಯ್ ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಸಿ.ಜೆ ರಾಯ್ ಅವರ ಆತ್ಮಹತ್ಯೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಭಾರಿ ಆಘಾತವನ್ನುಂಟು ಮಾಡಿದೆ. ದಾಳಿಯ ಸಮಯದಲ್ಲಿ, ಅಧಿಕಾರಿಗಳು ಸಿ.ಜೆ ರಾಯ್ ಅವರನ್ನು ಪ್ರಶ್ನಿಸಿದ್ದರು. ಅಧಿಕಾರಿಗಳು ಕೇಳಿದ ದಾಖಲೆಗಳನ್ನು ಸಂಗ್ರಹಿಸಲು ಮುಂದಿನ ಕೋಣೆಗೆ ಹೋಗಿದ್ದ ಸಿ.ಜೆ ರಾಯ್, ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ನಿಗೂಢತೆ ಸೃಷ್ಠಿಸಿದ್ದು ಇವರ ಕುಟುಂಬ ಐಟಿ ಅಧಿಕಾರಿಗಳ ಬಗ್ಗೆ ದೂರುತ್ತಿದ್ದಾರೆ. ರಾಯ್ ಐಷಾರಾಮಿ ಕಾರುಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಅವರು ದುಬೈ ಮತ್ತು ಭಾರತದಲ್ಲಿ ಅನೇಕ ದುಬಾರಿ ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರುಗಳನ್ನು ಖರೀದಿಸಿದ್ದರು. ರೋಲ್ಸ್ ರಾಯ್ಸ್, ಲಂಬೋರ್ಘಿನಿ, ಬುಗಾಟಿಯಂತಹ ಕಾರುಗಳು ಅವರ ಗ್ಯಾರೇಜ್‌ನಲ್ಲಿದ್ದವು, ರಾಯ್ ಅವರ ಕಾನ್ಫಿಡೆಂಟ್ ಗ್ರೂಪ್ ಸುಮಾರು 165 ಯೋಜನೆಗಳನ್ನು ಪೂರ್ಣಗೊಳಿಸಿದೆ. ಇದು 15,000 ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಉದ್ಯಮಶೀಲತೆಯ ಜೊತೆಗೆ, ಡಾ. ರಾಯ್ ತಮ್ಮ ವ್ಯವಹಾರವನ್ನು ಮನರಂಜನೆ, ಶಿಕ್ಷಣ, ಆತಿಥ್ಯ, ಗಲ್ಫ್, ಚಿಲ್ಲರೆ ವ್ಯಾಪಾರ ಮತ್ತು ಅಂತರರಾಷ್ಟ್ರೀಯ ವ್ಯಾಪಾರದಂತಹ ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿದ್ದಾರೆ. ಅವರು ಮಲಯಾಳಂ ಮತ್ತು ಕನ್ನಡದಲ್ಲಿ 11 ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ 'ಮರಕ್ಕರ್ ಅರಬಿಕದ ಲಿಂಟೆ ಸಿಂಹಮ್' ಮತ್ತು 'ಐಡೆಂಟಿಟಿ' ಚಿತ್ರಗಳ ನಿರ್ಮಾಪಕರಾಗಿದ್ದರು. 2006ರಲ್ಲಿ, ಜನಪ್ರಿಯ ಟಿವಿ ಕಾರ್ಯಕ್ರಮ 'ಐಡಿಯಾ ಸ್ಟಾರ್ ಸಿಂಗರ್' ಅನ್ನು ಕಾನ್ಫಿಡೆಂಟ್ ಗ್ರೂಪ್ ಪ್ರಾಯೋಜಿಸಿತ್ತು. ಹೀಗಿರುವಾಗ ದೀಢೀರನೆ ಇವರು ಆತ್ಮಹತ್ಯೆಗೈಯಲು ಕಾರಣವೆನೆಂದು ತಿಳಿದು ಬಂದಿಲ್ಲ.

0 Comments