Ticker

6/recent/ticker-posts

Ad Code

ತಂದೆ,ತಾಯಿ, ಸಹೋದರಿಯನ್ನು ಕೊಂದು ಮನೆಯಲ್ಲಿಯೇ ಹೂತು ಹಾಕಿ ಮಿಸ್ಸಿಂಗ್‌ ಕಂಪ್ಲೇಂಟ್ ಕೊಟ್ಟ ಕಟುಕನ ಸೆರೆ

 

ಬಳ್ಳಾರಿ: ಯುವಕನೊಬ್ಬ ತನ್ನ ತಂದೆ, ತಾಯಿ ಹಾಗೂ ಸಹೋದರಿಯನ್ನು ಕೊಂದು ಬಾಡಿಗೆ ಮನೆಯ ಒಳಗೆ ಹೂತು ಹಾಕಿ ಮಿಸ್ಸಿಂಗ್ ಕಂಪ್ಲೇಟು ಕೊಡಲು ತೆರಳಿ ಸ್ವತಃ ಪೋಲಿಸರ ಕೈಯೊಳಗೆ ಸೆರೆಯಾದ ಪ್ರಕರಣ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದಿದೆ.

ಅಕ್ಷಯ್ ಕುಮಾರ್ ಕೊಲೆ ಆರೋಪಿಯಾಗಿದ್ದು, ಈತ ಜ.27 ರಂದು ತನ್ನ ತಂದೆ ಭೀಮರಾಜ್, ತಾಯಿ ಜಯಲಕ್ಷ್ಮಿ ಹಾಗೂ ಸಹೋದರಿ ಅಮೃತಾಳನ್ನ ಕೊಲೆ ಮಾಡಿ ಬೆಂಗಳೂರಿಗೆ ಎಸ್ಕೇಪ್ ಆಗಿದ್ದ. ಬಳಿಕ ಬೆಂಗಳೂರಿನ ತಿಲಕ ನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ಕೊಡಲು ಮುಂದಾಗಿದ್ದ. 

ದೂರು ಕೊಡಲು ಹೋದಾಗ, ಆತನ ನಡವಳಿಕೆ ಕಂಡು ಪೊಲೀಸರಿಗೆ ಅನುಮಾನ ಬಂದಿತ್ತು. ಅನುಮಾನಗೊಂಡ ಪೊಲೀಸರು ಚೆನ್ನಾಗಿ ವಿಚಾರಣೆ ಮಾಡಿದಾಗ ತಾನೇ ಕೊಲೆ ಮಾಡಿರೋದಾಗಿ ಬಾಯ್ಬಿಟ್ಟಿದ್ದಾನೆ. ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ.

Post a Comment

0 Comments