Ticker

6/recent/ticker-posts

Ad Code

ಧನುರ್ಮಾಸ ಪೂಜೆಗೆ ತೆರಳಿದ ಬಾಲಕನ ಮೃತದೇಹ ಕೆರೆಯಲ್ಲಿ ಪತ್ತೆ

 

ಬೆಳ್ತಂಗಡಿ: ಧನುರ್ಮಾಸ ಪೂಜೆಗೆಂದು ಮುಂಜಾನೆ ಮನೆಯಿಂದ ತೆರಳಿದ್ದ ಬಾಲಕನೋರ್ವನ ಮೃತದೇಹ ಕೆರೆಯೊಂದರಲ್ಲಿ  ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಿಂದ ವರದಿಯಾಗಿದೆ. ಕುವೆಟ್ಟು ಗ್ರಾಮದ ಸಂಬೋಳ್ಯ ನಿವಾಸಿ ಸುಮಂತ್ (15) ಮೃತ ಬಾಲಕ. ಇಂದು ಮುಂಜಾನೆ 4 ಗಂಟೆಗೆ ಧನು ಪೂಜೆಗೆಂದು ದೇವಸ್ಥಾನಕ್ಕೆ ತೆರಳಿದ್ದ ಬಾಲಕ ಮನೆಗೆ ವಾಪಾಸ್ ಬಾರದಿರುವಾಗ ವಿಚಾರಿಸಿದ ಪೋಷಕರಿಗೆ  ದೇವಸ್ಥಾನಕ್ಕೆ ಬಂದಿಲ್ಲ ಎಂದು ಮಾಹಿತಿ ಲಭ್ಯವಾಗಿತ್ತು. ಈ ಹಿನ್ನಲೆಯಲ್ಲಿ ಹುಡುಕಾಟ ನಡೆಸಿದಾಗ ಮನೆಗೆ ಬರುವ ದಾರಿಯಲ್ಲಿ  ರಕ್ತ ಬಿದ್ದಿರುವುದು  ಪತ್ತೆಯಾಗಿತ್ತು. ಬಳಿಕ ಪಕ್ಕದಲ್ಲೇ ಇದ್ದ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಕೆರೆಯಲ್ಲಿ ಸುಮಂತ್ ಶವ ಪತ್ತೆಯಾಗಿತ್ತು. ತಲೆಯಲ್ಲಿ ಗಾಯ ಕಂಡು ಬಂದಿದ್ದು ನಿಗೂಢತೆ ಸೃಷ್ಟಿಸಿದೆ. ಬೆಳ್ತಂಗಡಿ ತಹಶಿಲ್ದಾರ್ ಸ್ಥಳಕ್ಕೆ ತೆರಳಿದ್ದರು. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments