ಬದಿಯಡ್ಕ : ನೆಕ್ರಾಜೆಯ ಸಮೀಪ ಕೃಷಿಕರೋರ್ವರು ಕಾಲು ಜಾರಿ ಕೆರೆಗೆ ಬಿದ್ದು ಮೃತ್ಯು. ಇಲ್ಲಿನ ಕೃಷ್ಣ ಕೃಪಾದ ನಿವಾಸಿ ಕೃಷಿಕರಾಗಿರುವ ಎನ್. ಸುಬ್ಬಣ್ಣ ಆಳ್ವ (82) ಮೃತ ವ್ಯಕ್ತಿ. ನಿನ್ನೆ ಸಂಜೆ ಕಂಗಿನ ತೋಟಕ್ಕೆ ಹೋಗಿದ್ದು, ಬಹಳ ಹೊತ್ತಾದರೂ ಹಿಂತಿರುಗದ ಕಾರಣ ಹುಡುಕಾಟ ನಡೆಸಲಾಯಿತು. ಬಳಿಕ ತೋಟದ ಕೆರೆಯಲ್ಲಿ ಇವರ ಮೃತದೇಹ ಕಂಡುಬಂದಿದೆ. ಸ್ಥಳೀಯರು ಕೆರೆಯಿಂದ ಮೇಲೆತ್ತಲು ಪ್ರಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಕಾಸರಗೋಡಿನ ಅಗ್ನಿಶಾಮಕ ದಳದವರು ಬಂದು ಮೇಲೆತ್ತಿದರು. ಕಾಸರಗೋಡಿನ ಆಸ್ಪತ್ರೆಗೆ ಕರೆದೊಯ್ದರೂ, ಅವರ ಜೀವ ಉಳಿಸಲಾಗಲಿಲ್ಲ. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಮೃತರು ಪತ್ನಿ: ವಸಂತಿ ಆಳ್ವ. ಮಕ್ಕಳು: ಕೃಷ್ಣವೇಣಿ, ಮನೋಜ್ ಎಸ್ ಆಳ್ವ (ವಕೀಲರು, ಮಂಗಳೂರು). ಸೊಸೆ: ರಾಧಾಕೃಷ್ಣ ರೈ, ರೂಪಾ ಆಳ್ವ. ಸಹೋದರರು: ಜಯಂತಿ ನಾಯಕ್ (ಶಿವಮೊಗ್ಗ), ಗಂಗಾಧರ್ ಆಳ್ವ. ಎಂಬಿವರನ್ನು ಅಗಲಿದ್ದಾರೆ.

0 Comments