ಬದಿಯಡ್ಕ : ನಾರಂಪಾಡಿ ಫಾತಿಮಾ ಎ.ಎಲ್. ಪಿ ಶಾಲೆಯ ವಾರ್ಷಿಕೋತ್ಸವವು 2026 ಜನವರಿ 30ರಂದು ವಿವಿಧ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಈ ಸಂದರ್ಭದಲ್ಲಿ ತಮ್ಮ ಸುದೀರ್ಘ ಅಧ್ಯಾಪನ ಸೇವೆಯಿಂದ ನಿವೃತ್ತಿ ಹೊಂದಲಿರುವ ಅಧ್ಯಾಪಕ ಜೋನ್ ಕ್ರಾಸ್ತಾ ಹಾಗೂ ಅಧ್ಯಾಪಿಕೆ ಲಿಲ್ಲಿ ಕ್ರಾಸ್ತಾ ಇವರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮದಂಗವಾಗಿ ಅಂದು ಬೆಳಗ್ಗೆ 9.30ಕ್ಕೆ ಧ್ವಜಾರೋಹಣ, ಬಹುಮಾನ ವಿತರಣೆ ನಡೆಯಲಿರುವುದು. ಮಧ್ಯಾಹ್ನ 12.30ಕ್ಕೆ ಭೋಜನ, ಸಂಜೆ 5ಗಂಟೆಗೆ ಕಾರ್ಯಕ್ರಮ ಆರಂಭವಾಗುವುದು. ಪ್ರವೀಣ್ ಲಿಯೋ ಲಸ್ರಾಡೋ, ಕಾರ್ಯದರ್ಶಿ ಕ್ಯಾಥೊಲಿಕ್ ಶಿಕ್ಷಣ ಮಂಡಳಿ ಮಂಗಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಂಸತ್ ಸದಸ್ಯ ರಾಜ್ ಮೋಹನ್ ಉಣ್ಣಿತ್ತಾನ್, ಕೇರಳ ವಿಧಾನ ಸಭೆಯ ಸದಸ್ಯ ಎನ್ ಎ ನೆಲ್ಲಿಕುನ್ನು, ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಜೇಮ್ಸ್ ಚೆರ್ಕಳ, ವಸಂತ ಅಜಕ್ಕೋಡ್ ಅಧ್ಯಕ್ಷರು ಚೆಂಗಳ ಗ್ರಾಮಪಂಚಾಯತ್ ,ಆಯಿಷತ್ ಮಿಸ್ರಿಯಾ ವಾರ್ಡ್ ಮೆಂಬರ್ ಚೆಂಗಳ ಗ್ರಾಮಪಂಚಾಯತ್, ಕುಂಬಳೆ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶಶಿಧರ ಎಂ, ಶೀನ ಎ. ಬಿಪಿಸಿ ಬಿಆರ್ ಸಿ ಕುಂಬಳೆ, ಜಾನ್ ಕ್ರಾಸ್ಟಾ ಉಪಾಧ್ಯಕ್ಷರು,ಪ್ಯಾರಿಸ್ ಕೌನ್ಸಿಲ್ ನಾರಂಪಾಡಿ ಚರ್ಚ್, ರವಿ ಕುಮಾರ್ ಕ್ರಾಸ್ಟಾ ಕಾರ್ಯದರ್ಶಿ ಪ್ಯಾರಿಸ್ ಕೌನ್ಸಿಲ್ ನಾರಂಪಾಡಿ ಚರ್ಚ್, ರಾಜು ಸ್ಟೆಫಾನ್ ಸಂಯೋಜಕರು ಪ್ಯಾರಿಸ್ ಕೌನ್ಸಿಲ್ ನಾರಂಪಾಡಿ ಚರ್ಚ್ ಮುಖ್ಯ ಅತಿಥಿಗಳಾಗಿರುವರು. ಧರ್ಮ ಗುರುಗಳು ರೆ. ಫಾ. ಅನಿಲ್ ಫ್ರಾನ್ಸಿಸ್ ಪಿಂಟೋ ಶಾಲಾ ಮುಖ್ಯೋಪಧ್ಯಾಯಿನಿ ಪ್ರೆಸಿಲ್ಲಾ ಡಿ ಕುನ್ಹಾ, ಪಿ ಟಿ ಎ ಅಧ್ಯಕ್ಷ ಜೋಸೆಫ್ ಮೊಂತೆರೋ ಶಾಲಾ ವಿದ್ಯಾರ್ಥಿ ನಾಯಕಿ ಕೀರ್ತನಾ ಕೆ ಉಪಸ್ಥಿತರಿರುವರು.
.jpeg)
0 Comments