ಅಡ್ಯನಡ್ಕ : ಕುದ್ದುಪದವು ಎರುಂಬು ಕುಂಞ್ಞತ ವಾಣಿಯರ್ ತರವಾಡು ಮನೆಯಲ್ಲಿ ತರವಾಡಿನ ದೈವಗಳ ಧರ್ಮ ನೇಮೋತ್ಸವವು ಫೆ 7 ಹಾಗೂ 8ರಂದು ಜರಗಲಿದೆ. ಇದರಂಗವಾಗಿ ಜ.31ಕ್ಕೆ ಬೆಳಗ್ಗೆ ಗಂಟೆ 7ಕ್ಕೆ ಮುಹೂರ್ತದ ಗೊನೆ ಕಡಿಯುವುದು, ಫೆ 07ಕ್ಕೆ ಬೆಳಗ್ಗೆ ಗಂಟೆ 7ಕ್ಕೆ ಗಣಪತಿ ಹೋಮ, ಗಂಟೆ 10ಕ್ಕೆ ಹರಿಸೇವೆ ಮತ್ತು ಮುಡಿಪಿಗೆ ಕಾಣಿಕೆ ಹಾಕುವುದು, ಮಧ್ಯಾಹ್ನ ಗಂಟೆ 12ಕ್ಕೆ ಮಂಗಳಾರತಿ, ಮುಡಿಪು ಕಟ್ಟುವುದು ಮತ್ತು ಪ್ರಸಾದ ವಿತರಣೆ ಜರಗಲಿದೆ. ಅಪರಾಹ್ನ 2ಗಂಟೆಗೆ ಸಭಾ ಕಾರ್ಯಕ್ರಮ, ಸಂಜೆ 5 ಗಂಟೆಗೆ ವಾರಣಾಸಿ ಮರಕ್ಕಿಣಿ ದೈವಸ್ಥಾನದಿಂದ ಭಂಡಾರದ ಆಗಮನ, ಗಂಟೆ 6ಕ್ಕೆ ತರವಾಡು ದೈವಗಳ ಭಂಡಾರ ತೆಗೆಯುವುದು, 6.30ಗಂಟೆಗೆ ಎಣ್ಣೆ ಬೂಳ್ಯ ನೀಡುವುದು, ಗಂಟೆ 10ಕ್ಕೆ ವರ್ಣರ ಪಂಜುರ್ಲಿ ದೈವ, ಕಲ್ಲುರ್ಟಿ ದೈವ, ಕೊರತ್ತಿ ಅಮ್ಮ ದೈವದ ನರ್ತನ. ಫೆ.8ರಂದು ಬೆಳಗ್ಗೆ ಗಂಟೆ 5ಕ್ಕೆ ವಿಷ್ಣುಮೂರ್ತಿ ದೈವದ ನೇಮ, 10ಕ್ಕೆ ಧರ್ಮದೈವದ ನೇಮ, ಮಧ್ಯಾಹ್ನ ಪ್ರಸಾದ ವಿತರಣೆ, ಸಂಜೆ ವಿಷ್ಣುಮೂರ್ತಿ ದೈವದ ಭಂಡಾರ ನಿರ್ಗಮನ ಹಾಗೂ ಚೌಕಾರು ಗುಳಿಗ ದೈವದ ಕೋಲ, ರಾತ್ರಿ ಗುರು ಕಾರ್ಣವರ ಸೇವೆಯೊಂದಿಗೆ ಸಮಾಪ್ತಿಗೊಳ್ಳಲಿದೆ.

0 Comments