ಪೆರ್ಲ : ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಓಡಿಲ್ನಾಳ ಗ್ರಾಮದ ಸಂಬೊಳ್ಯದ ಸುಬ್ರಹ್ಮಣ್ಯ ಹಾಗೂ ಲತಾ ದಂಪತಿಯ ಪುತ್ರ ಸುಮಂತ್ ಧನುಪೂಜೆಗೆಂದು ಹೊರಟು ಅಸಹಜವಾಗಿ ಸಾವನ್ನಪ್ಪಿದ ಪ್ರಕರಣ ನಿಗೂಢತೆಯನ್ನು ಸೃಷ್ಠಿಸಿದ್ದು ಇದನ್ನು ಬೇಧಿಸುವಂತಾಗಬೇಕೆಂದು ಪ್ರಾರ್ಥಿಸಿ ಮೊಗೇರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಶ್ರೀ ದೇವಿಯ ಅನುಗ್ರಹದಿಂದ ಸುಮಂತ್ ನ ಅಗಲುವಿಕೆ ಮನೆಯವರಿಗೆ ನೋವು ಸಹಿಸುವ ಶಕ್ತಿ ಪ್ರಾಪ್ತಿಯಾಗಲಿ, ಅಗಲಿದ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ನಾಗರೀಕ ಸಮಾಜದಲ್ಲಿ ಇಂತಹ ಅಹಿತಕರ ಘಟನೆ ನಡೆಯದೆ ದೇವಿಯು ಸರ್ವರನ್ನು ಕಾಪಾಡಲಿ, ಸುಮಂತ್ ನ ಸಾವಿನ ಕುರಿತಾದ ತನಿಖೆಯಲ್ಲಿ ಯಾವುದೇ ಅಡಚಣೆಗಳು ಬಾರದೆ ತಪ್ಪಿತಸ್ಥರು ಆದಷ್ಟು ಬೇಗ ಸಿಗುವಂತಾಗಲಿ ಎಂದು ಶ್ರೀ ದೇವಿಯಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು. ಕ್ಷೇತ್ರ ಆರ್ಚಕರು ಹಾಗೂ ಸಮಾಜ ಬಂಧುಗಳು ಉಪಸ್ಥಿತರಿದ್ದರು. ಈ ಬಗ್ಗೆ ಕ್ಷೇತ್ರದ ಆರ್ ಎಸ್ ಬಿ ಯುವ ಸಂಘ ಸುಮಂತ್ ಮನೆ ಭೇಟಿ ಮಾಡಿ ಬಳಿಕ ಬೆಳ್ತಂಗಡಿ ಸಿಐ ಅವರನ್ನು ಭೇಟಿ ಮಾಡಿ ಈ ಹಿಂದೆಯೇ ಮನವಿ ಸಲ್ಲಿಸಿತ್ತು.

0 Comments